ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ರಾಜತಾಂತ್ರಿಕ ಪಾಸ್‍ಪೋರ್ಟ್ ರದ್ದು

Update: 2024-08-23 16:10 GMT

ಶೇಖ್ ಹಸೀನಾ (Photo:PTI)

ಢಾಕಾ: ಬಾಂಗ್ಲಾದೇಶದ ಮಧ್ಯಂತರ ಸರಕಾರವು ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ರಾಜತಾಂತ್ರಿಕ ಪಾಸ್‍ಪೋರ್ಟ್ ಅನ್ನು ರದ್ದುಗೊಳಿಸಿದೆ.

ವಿದ್ಯಾರ್ಥಿಗಳ ಪ್ರತಿಭಟನೆ, ಹಿಂಸಾಚಾರದ ಹಿನ್ನೆಲೆಯಲ್ಲಿ ರಾಜೀನಾಮೆ ಸಲ್ಲಿಸಿ ಭಾರತಕ್ಕೆ ಪಲಾಯನ ಮಾಡಿರುವ ಹಸೀನಾ ಅವರಿಗೆ ಈ ಕ್ರಮವು ಇಕ್ಕಟ್ಟಿನ ಪರಿಸ್ಥಿತಿಗೆ ಕಾರಣವಾಗಲಿದೆ. ಈ ಮಧ್ಯೆ, ಪ್ರತಿಭಟನೆ, ಹಿಂಸಾಚಾರವನ್ನು ನಿಯಂತ್ರಿಸಲು ಹಸೀನಾ ಸರಕಾರ ಕೈಗೊಂಡಿದ್ದ ಕ್ರಮವು ಮಾನವ ಹಕ್ಕುಗಳ ಉಲ್ಲಂಘನೆಗೆ ಕಾರಣವಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಸಲು ವಿಶ್ವಸಂಸ್ಥೆಯ ತನಿಖಾ ತಂಡ ಗುರುವಾರ ಬಾಂಗ್ಲಾಕ್ಕೆ ಆಗಮಿಸಿದೆ ಎಂದು ವರದಿಯಾಗಿದೆ.

ಶೇಖ್ ಹಸೀನಾ, ಅವರ ಸರಕಾರದಲ್ಲಿ ಸಚಿವರಾಗಿದ್ದವರು ಹಾಗೂ ಮಾಜಿ ಸಂಸದರ ಪಾಸ್‍ಪೋರ್ಟ್‍ಗಳನ್ನು ರದ್ದುಗೊಳಿಸಲಾಗಿದೆ ಎಂದು ಆಂತರಿಕ ಸಚಿವಾಲಯ ಹೇಳಿದೆ. ಹಸೀನಾ ಹಾಗೂ ಅವರ ಆಡಳಿತಾವಧಿಯಲ್ಲಿದ್ದ ಹಿರಿಯ ಅಧಿಕಾರಿಗಳು, ಸಚಿವರು ಪ್ರಮಾಣಿತ ಪಾಸ್‍ಪೋರ್ಟ್‍ಗೆ ಅರ್ಜಿ ಸಲ್ಲಿಸಬಹುದು. ಸಾಮಾನ್ಯ ಪಾಸ್‍ಪೋರ್ಟ್‍ಗೆ ಹೊಸದಾಗಿ ಅರ್ಜಿ ಸಲ್ಲಿಸಿದಾಗ ಎರಡು ಭದ್ರತಾ ಏಜೆನ್ಸಿಗಳ ಕ್ಲಿಯರೆನ್ಸ್ ಅಗತ್ಯವಿದೆ. ಕ್ಲಿಯರೆನ್ಸ್ ದೊರೆತರೆ ಮಾತ್ರ ಪಾಸ್‍ಪೋರ್ಟ್‍ಗೆ ಅನುಮೋದನೆ ದೊರಕುತ್ತದೆ ಎಂದು ಸಚಿವಾಲಯ ಹೇಳಿದೆ. ಈ ಕ್ರಮವು ಹಸೀನಾ ಪ್ರಸ್ತುತ ಆಶ್ರಯ ಪಡೆದಿರುವ ಭಾರತಕ್ಕೆ ರಾಜತಾಂತ್ರಿಕ ಸಂದಿಗ್ಧತೆಯನ್ನೂ ಒಡ್ಡಲಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News