ಬಾಂಗ್ಲಾದೇಶ: ಶೇಖ್‌ ಹಸೀನಾ ರಾಜೀನಾಮೆ ನಂತರದ ಹಿಂಸಾಚಾರದಲ್ಲಿ 100ಕ್ಕೂ ಅಧಿಕ ಮಂದಿ ಬಲಿ; ವರದಿ

Update: 2024-08-06 12:41 GMT

ಸಾಂದರ್ಭಿಕ ಚಿತ್ರ | PC : NDTV

ಢಾಕಾ: ದೇಶವ್ಯಾಪಿ ಮೀಸಲಾತಿ ಹಾಗೂ ಸರ್ಕಾರ ವಿರುದ್ಧ ಹೋರಾಟದಲ್ಲಿ ವ್ಯಾಪಕ ಹಿಂಸಾಚಾರ, ಸಾವುನೋವುಗಳು ಉಂಟಾಗಿರುವ ನಡುವೆ ಸೋಮವಾರ ತಮ್ಮ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ಶೇಖ್‌ ಹಸೀನಾ ಅವರು ದೇಶ ಬಿಟ್ಟು ಪಲಾಯನಗೈದಿರುವ ಬೆಳವಣಿಗೆಯ ನಂತರ ದೇಶದಲ್ಲಿ ನಡೆದ ಹಿಂಸಾಚಾರದಲ್ಲಿ 100ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆಂದು ವರದಿಯಾಗಿದೆ.

ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ ಹಿಂಸಾಚಾರದ ಘಟನೆಗಳಲ್ಲಿ 100ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.

ಬಂಗಾಳಿ ಪತ್ರಿಕೆ ಪ್ರೊಥೊಮ್‌ ಅಲೊ ವರದಿಯ ಪ್ರಕಾರ ದೇಶದಲ್ಲಿ ಸೋಮವಾರದಿಂದ ಹಿಂಸಾತ್ಮಕ ಘಟನೆಗಳಲ್ಲಿ 109 ಜನರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಇಲ್ಲಿಯ ತನಕ ದೇಶದಲ್ಲಿ ಹಿಂಸಾಚಾರಕ್ಕೆ ಬಲಿಯಾದವರ ಸಂಖ್ಯೆ 440ಕ್ಕೆ ಏರಿಕೆಯಾಗಿದೆ ಎಂದು ಪತ್ರಿಕೆ ತನ್ನ ವರದಿಯಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News