ಭಾರತೀಯ ಉತ್ಪನ್ನಗಳ ಬಹಿಷ್ಕಾರಕ್ಕೆ ಬಾಂಗ್ಲಾದ ವಿರೋಧ ಪಕ್ಷ ಕರೆ
Update: 2024-04-01 18:08 GMT
ಢಾಕ: ಬಾಂಗ್ಲಾದಲ್ಲಿ ಭಾರತೀಯ ಉತ್ಪನ್ನಗಳ ಬಹಿಷ್ಕಾರಕ್ಕೆ ಕರೆ ನೀಡಿರುವ ವಿರೋಧ ಪಕ್ಷ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ(ಬಿಎನ್‍ಪಿ)ಯನ್ನು ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ತರಾಟೆಗೆತ್ತಿಕೊಂಡಿದ್ದಾರೆ.
ಬಿಎನ್‍ಪಿ ಮುಖಂಡರ ಪತ್ನಿಯರು ಎಷ್ಟು ಭಾರತೀಯ ಸೀರೆ ಹೊಂದಿದ್ದಾರೆ ಮತ್ತು ಅದರಲ್ಲಿ ಎಷ್ಟನ್ನು ಬೆಂಕಿಗೆ ಹಾಕಿದ್ದಾರೆ ಎಂಬುದನ್ನು ಮೊದಲು ಸ್ಪಷ್ಟಪಡಿಸಲಿ ಎಂದು ಹಸೀನಾ ಆಗ್ರಹಿಸಿದ್ದಾರೆ. ಬಿಎನ್‍ಪಿ ಅಧಿಕಾರದಲ್ಲಿದ್ದಾಗ ಪಕ್ಷದ ಸಚಿವರು ಮತ್ತವರ ಪತ್ನಿಯರು ಭಾರತಕ್ಕೆ ಪ್ರವಾಸ ತೆರಳಿದಾಗಲೆಲ್ಲಾ ಭಾರತದಿಂದ ಸೀರೆಗಳನ್ನು ಖರೀದಿಸಿ ತಂದು ಬಾಂಗ್ಲಾದಲ್ಲಿ ಮಾರಾಟ ಮಾಡುತ್ತಿದ್ದರು. ಭಾರತದಿಂದ ಬರುವ ಗರಮ್ ಮಸಾಲಾ, ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಇತ್ಯಾದಿ ಮಸಾಲೆಗಳು ಬಿಎನ್‍ಪಿ ಮುಖಂಡರ ಮನೆಯಲ್ಲಿ ಇರಬಾರದು' ಎಂದು ಹಸೀನಾ ಹೇಳಿದ್ದಾರೆ.