ಮೋದಿಗೆ ಕರೆ ಮಾಡಿ ಬಾಂಗ್ಲಾದೇಶ ಜನತೆಯ ಸುರಕ್ಷತೆ ಕುರಿತು ಕಳವಳ ವ್ಯಕ್ತಪಡಿಸಿದ ಬೈಡನ್ : ಶ್ವೇತ ಭವನ

Update: 2024-09-05 06:29 GMT

Photo : PTI

ವಾಶಿಂಗ್ಟನ್ : ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರೆ ಮಾಡಿದ್ದ ಅಮೆರಿಕ ಅಧ್ಯಕ್ಷ ಜೋ ಬೈಡನ್, ಬಾಂಗ್ಲಾದೇಶದ ಜನತೆಯ ಸುರಕ್ಷತೆ ಹಾಗೂ ಅಲ್ಲಿನ ಪ್ರಜಾಸತ್ತಾತ್ಮಕ ಸಂಸ್ಥೆಗಳ ಭವಿಷ್ಯದ ಕುರಿತು ಕಳವಳ ವ್ಯಕ್ತಪಡಿಸಿದರು ಎಂದು ಶ್ವೇತ ಭವನ ತಿಳಿಸಿದೆ.

ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಶ್ವೇತ ಭವನದ ರಾಷ್ಟ್ರೀಯ ಭದ್ರತೆ ಸಂವಹನ ಸಲಹೆಗಾರ ಜಾನ್ ಕಿರ್ಬಿ ಮಾತನಾಡಿ, ದೂರವಾಣಿ ಕರೆಯ ಸಂದರ್ಭದಲ್ಲಿ ಬೈಡನ್ ಹಾಗೂ ಮೋದಿ ಬಾಂಗ್ಲಾದೇಶದಲ್ಲಿನ ಇತ್ತೀಚಿನ ಬೆಳವಣಿಗೆಗಳ ಕುರಿತು ಕಳವಳ ಹಂಚಿಕೊಂಡರು ಎಂದು ತಿಳಿಸಿದ್ದಾರೆ.

“ಅಧ್ಯಕ್ಷ ಬೈಡನ್ ಅವರು ಬಾಂಗ್ಲಾದೇಶದಲ್ಲಿನ ಜನರ ಸುರಕ್ಷತೆ ಮತ್ತು ಭದ್ರತೆ ಹಾಗೂ ಅಲ್ಲಿನ ಪ್ರಜಾಸತ್ತಾತ್ಮಕ ಸಂಸ್ಥೆಗಳ ಭವಿಷ್ಯದ ಕುರಿತ ತಮ್ಮ ಮುಂದುವರಿದ ಕಳವಳವನ್ನು ಸ್ಪಷ್ಟಪಡಿಸಿದರು ” ಎಂದು ಪ್ರಶ್ನೆಯೊಂದಕ್ಕೆ ಜಾನ್ ಕಿರ್ಬಿ ಉತ್ತರಿಸಿದರು.

ಆಗಸ್ಟ್ 26ರಂದು ಶ್ವೇತ ಭವನ ಬಿಡುಗಡೆ ಮಾಡಿದ್ದ ಪ್ರಕಟಣೆಯಲ್ಲಿ ಕರೆಯ ಸಂದರ್ಭದಲ್ಲಿ ಬಾಂಗ್ಲಾದೇಶ ಕುರಿತು ಪ್ರಸ್ತಾಪವಾಗಿರುವುದನ್ನು ಉಲ್ಲೇಖಿಸಿರಲಿಲ್ಲ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿಯು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಮಾಡಿದ್ದ ಪೋಸ್ಟ್ ನಲ್ಲಿ ದೂರವಾಣಿ ಕರೆಯ ಸಂದರ್ಭದಲ್ಲಿ ಬಾಂಗ್ಲಾದೇಶದ ಕುರಿತು ಚರ್ಚೆಯಾಗಿತ್ತು ಎಂದು ಉಲ್ಲೇಖಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News