ಉಕ್ರೇನ್‌ ಅಧ್ಯಕ್ಷ ಝೆಲೆನ್ಸ್ಕಿಯವರನ್ನು ʼಅಧ್ಯಕ್ಷ ಪುಟಿನ್ʼ ಎಂದು ಪರಿಚಯಿಸಿದ ಬೈಡನ್!

Update: 2024-07-12 17:12 GMT

ಜೋ ಬೈಡನ್,  ಝೆಲೆನ್ಸ್ಕಿ | PC : PTI

ವಾಷಿಂಗ್ಟನ್ : ಅಮೆರಿಕದಲ್ಲಿ ನಡೆಯುತ್ತಿರುವ ನೇಟೊ ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತೆ ಎಡವಟ್ಟು ಮಾಡಿಕೊಂಡಿದ್ದಾರೆ. ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಯನ್ನು ಪರಿಚಯಿಸುವಾಗ `ಅಧ್ಯಕ್ಷ ವ್ಲಾದಿಮಿರ್ ಪುಟಿನ್' ಎಂದು ಉಲ್ಲೇಖಿಸಿದ ಪ್ರಸಂಗ ಗುರುವಾರ ನಡೆದಿದೆ.

ಪ್ರಮಾದದ ಅರಿವಾದೊಡನೆ ಬೈಡನ್ ತಪ್ಪನ್ನು ತಿದ್ದಿಕೊಂಡರು. ಝೆಲೆನ್ಸ್ಕಿರ ಒಮ್ಮೆ ಗಲಿಬಿಲಿಗೊಂಡರೂ ತಕ್ಷಣ ಸಾವರಿಸಿಕೊಂಡು `ನಾನು ಚೆನ್ನಾಗಿದ್ದೇನೆ' ಎಂದು ಬೈಡನ್ ಕೈಕುಲುಕಿದರು. ಪುಟಿನ್ರೂನ್ನು ಸೋಲಿಸುವತ್ತ ಗಮನ ಕೇಂದ್ರೀಕರಿಸಿರುವುದರಿಂದ ಹೀಗೆ ಸಂಭವಿಸಿದೆ' ಎಂದು ಬೈಡನ್ ಸಮಜಾಯಿಷಿ ನೀಡಿದರು ಎಂದು ವರದಿಯಾಗಿದೆ. ಬಳಿಕ ಸುದ್ದಿಗೋಷ್ಠಿಯಲ್ಲಿ ಮತ್ತೊಮ್ಮೆ ಬೈಡನ್ ಎಡವಟ್ಟು ಮಾಡಿಕೊಂಡರು. `ಒಂದು ವೇಳೆ ನಿಮ್ಮ ಬದಲು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಸ್ಪರ್ಧಿಸಿದರೆ ಅವರು ಟ್ರಂಪ್ರ್ನ್ನು ಸೋಲಿಸಬಹುದೇ? ಎಂಬ ಪ್ರಶ್ನೆಗೆ ಉತ್ತರಿಸಿದ ಬೈಡನ್ ` ಉಪಾಧ್ಯಕ್ಷ ಟ್ರಂಪ್ ಅಧ್ಯಕ್ಷರಾಗಲು ಅರ್ಹರಲ್ಲ ಎಂದು ನಾನು ಭಾವಿಸಿದ್ದರೆ ಅವರನ್ನು ಉಪಾಧ್ಯಕ್ಷರಾಗಿ ಆಯ್ಕೆ ಮಾಡುತ್ತಿರಲಿಲ್ಲ' ಎಂದು ಉತ್ತರಿಸಿರುವುದಾಗಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News