ಉಕ್ರೇನ್, ಇಸ್ರೇಲ್, ತೈವಾನ್‍ಗೆ 95 ಶತಕೋಟಿ ಡಾಲರ್ ಯುದ್ಧನಿಧಿಗೆ ಅಮೆರಿಕ ಸಂಸತ್ ಅನುಮೋದನೆ
Update: 2024-04-24 17:23 GMT
ವಾಷಿಂಗ್ಟನ್: ಉಕ್ರೇನ್, ಇಸ್ರೇಲ್ ಮತ್ತು ತೈವಾನ್‍ಗೆ 95 ಶತಕೋಟಿ ಡಾಲರ್ ಯುದ್ಧನೆರವು ಒದಗಿಸುವ ಮಸೂದೆಗೆ ಅಮೆರಿಕದ ಸಂಸತ್ 79-18 ಮತಗಳಿಂದ ಅನುಮೋದನೆ ನೀಡಿದೆ.
ವಿದೇಶದಲ್ಲಿ ನಡೆಯುವ ಯುದ್ಧಗಳಲ್ಲಿ ಅಮೆರಿಕ ಹೇಗೆ ತೊಡಗಿಸಿಕೊಳ್ಳಬೇಕು ಎಂಬ ಬಗ್ಗೆ ಹಲವು ತಿಂಗಳಿಂದ ಮುಂದುವರಿದ ಚರ್ಚೆಯ ಬಳಿಕ ಅಂತಿಮವಾಗಿ ಮಸೂದೆಯನ್ನು ಅಂಗೀಕರಿಸಿ ಸಹಿಗಾಗಿ ಅಧ್ಯಕ್ಷ ಜೋ ಬೈಡನ್ ಕಚೇರಿಗೆ ಕಳುಹಿಸಲಾಗಿದೆ ಎಂದು ಮೂಲಗಳು ಹೇಳಿವೆ.