ನಿಜ್ಜಾರ್ ಹತ್ಯೆಯ ತನಿಖೆಗೆ ಬ್ರಿಟನ್ ಬೆಂಬಲ

Update: 2023-09-20 17:16 GMT

ಹರ್ದೀಪ್ ಸಿಂಗ್ | Photo: NDTV

ಲಂಡನ್: ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯ ಕುರಿತು ಕೆನಡಾ ನಡೆಸುವ ತನಿಖೆಯನ್ನು ಬ್ರಿಟನ್ ಸರಕಾರ ಬೆಂಬಲಿಸಲಿದೆ ಎಂದು ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ಜೇಮ್ಸ್ ಕ್ಲೆವರ್ಲೆ ಹೇಳಿದ್ದಾರೆ.

ತಾನು ಸೋಮವಾರ ಜಸ್ಟಿನ್ ಟ್ರೂಡೊರನ್ನು ಭೇಟಿಯಾಗಿದ್ದು ಈ ಪ್ರಕರಣದ ಬಗ್ಗೆ ಚರ್ಚಿಸಿದ್ದೇನೆ. ಕೆನಡಾದ ಅಧಿಕಾರಿಗಳಿಗೆ ತನಿಖೆ ನಡೆಸಲು ನಾವು ಅವಕಾಶ ನೀಡುವುದು ಮುಖ್ಯವಾಗಿದೆ. ನಿಸ್ಸಂಶಯವಾಗಿ ನಾವು ಕೆನಡಾದೊಂದಿಗೆ ಬಹಳ ಬಲವಾದ ಸಂಬಂಧವನ್ನು ಹೊಂದಿದ್ದೇವೆ. ಈ ತನಿಖೆಯಲ್ಲಿ ಭಾರತದ ಸಂಪೂರ್ಣ ಸಹಕಾರವನ್ನು ನಿರೀಕ್ಷಿಸುತ್ತೇನೆ' ಎಂದವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News