ಕಾಂಬೋಡಿಯಾ | ಸೈಬರ್ ಗುಲಾಮಗಿರಿಯಿಂದ 14 ಭಾರತೀಯರ ರಕ್ಷಣೆ

Update: 2024-07-20 16:48 GMT

ಸಾಂದರ್ಭಿಕ ಚಿತ್ರ | Photo: NDTV

ನಾಮ್ ಪೆನ್ : ಕಂಬೋಡಿಯಾದಲ್ಲಿ ಸೈಬರ್ ಗುಲಾಮಗಿರಿಯಿಂದ ರಕ್ಷಿಸಲ್ಪಟ್ಟಿರುವ 14 ಭಾರತೀಯರು ಸ್ವದೇಶಕ್ಕೆ ಶೀಘ್ರವೇ ಮರಳಲು ಅನುಕೂಲ ಮಾಡಿಕೊಡುವಂತೆ ಭಾರತೀಯ ರಾಯಭಾರಿ ಕಚೇರಿಗೆ ಮನವಿ ಮಾಡಿರುವುದಾಗಿ ವರದಿಯಾಗಿದೆ.

ಆಕರ್ಷಕ ಉದ್ಯೋಗದ ಆಮಿಷ ಒಡ್ಡಿ ತಮ್ಮನ್ನು ಮೋಸದಿಂದ ಸೈಬರ್ ವಂಚನೆ ಜಾಲಕ್ಕೆ ತಳ್ಳಿರುವುದಾಗಿ ಇವರು ಮಾಹಿತಿ ನೀಡಿದ್ದಾರೆ. ಸ್ಥಳೀಯ ಪೊಲೀಸರಿಂದ ರಕ್ಷಿಸಲ್ಪಟ್ಟವರಲ್ಲಿ ಹೆಚ್ಚಿನವರು ಉತ್ತರ ಪ್ರದೇಶ ಮತ್ತು ಬಿಹಾರದವರು. ಇವರಿಗೆ ಕಾಂಬೋಡಿಯಾದ ಸರಕಾರೇತರ ಸಂಘಟನೆ(ಎನ್ಜಿಉಒ) ವ್ಯವಸ್ಥೆಗೊಳಿಸಿರುವ ಹೋಟೆಲ್ನರಲ್ಲಿ ವಾಸ್ತವ್ಯ ಕಲ್ಪಿಸಲಾಗಿದೆ ಎಂದು ಎನ್ಡಿತಟಿವಿ ವರದಿ ಮಾಡಿದೆ.

ಭಾರತೀಯ ಪ್ರಜೆಗಳಿಗೆ ಕಾಂಬೋಡಿಯಾದಲ್ಲಿ ಉತ್ತಮ ಉದ್ಯೋಗದ ಭರವಸೆ ನೀಡಲಾಗುತ್ತದೆ. ಆದರೆ ಅವರು ದೇಶಕ್ಕೆ ಬಂದ ನಂತರ ಅವರ ಪಾಸ್ಪೋದರ್ಟ್ಗಉಳನ್ನು ಮುಟ್ಟುಗೋಲು ಹಾಕಿಕೊಂಡು ಸೈಬರ್ ಅಪರಾಧ ಜಾಲದಲ್ಲಿ ಕೆಲಸ ಮಾಡಲು ಬಲವಂತಗೊಳಿಸಲಾಗುತ್ತದೆ ಎಂದು ವರದಿ ಹೇಳಿದೆ.  

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News