ಭಾರತದ ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಬೇಕು: ಕೆನಡಾ ಸರಕಾರ

Update: 2024-10-07 15:07 GMT

ಜಸ್ಟಿನ್ ಟ್ರೂಡೊ ,  ನರೇಂದ್ರ ಮೋದಿ | PTI

ಒಟ್ಟಾವ: ಭಾರತದ ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಬೇಕು ಎಂಬುದು ಕೆನಡಾ ಸರಕಾರದ ನೀತಿಯಾಗಿದೆ. ಒಂದು ಭಾರತ ಮಾತ್ರ ಇರಲು ಸಾಧ್ಯ ಎಂಬುದು ನಮ್ಮ ಅತ್ಯಂತ ಸ್ಪಷ್ಟ ನಿಲುವಾಗಿದೆ ಎಂದು ಕೆನಡಾದ ಸಹಾಯಕ ವಿದೇಶಾಂಗ ಸಚಿವ ಡೇವಿಡ್ ಮಾರಿಸನ್ ಹೇಳಿದ್ದಾರೆ.

ಖಾಲಿಸ್ತಾನ್ ಪ್ರತ್ಯೇಕತಾವಾದಿ ಮುಖಂಡ ಹರ್ದೀಪ್ ಸಿಂಗ್ ಹತ್ಯೆಯ ಹಿಂದೆ ಭಾರತ ಇದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಆರೋಪಿಸಿದ ಬಳಿಕ ಉಭಯ ದೇಶಗಳ ಸಂಬಂಧ ಹದಗೆಟ್ಟಿರುವ ನಡುವೆ ಕೆನಡಾ ಸರಕಾರದ ಪ್ರತಿನಿಧಿಯ ಈ ಹೇಳಿಕೆ ಗಮನಾರ್ಹವಾಗಿದೆ.

ಎರಡೂ ದೇಶಗಳ ನಡುವಿನ ಮಾತುಕತೆ ಖಾಸಗಿಯಾಗಿ ಮುಂದುವರಿದಿವೆ. ನಾವು ಮುಕ್ತ ಸಂವಹನ ವ್ಯವಸ್ಥೆಯನ್ನು ಹೊಂದಿದ್ದು ಭಾರತದೊಂದಿಗಿನ ಮಾತುಕತೆ ಮುಂದುವರಿಸಿದ್ದೇವೆ ಎಂದು ಮಾರಿಸನ್ ಹೇಳಿರುವುದಾಗಿ `ಹಿಂದುಸ್ತಾನ್ ಟೈಮ್ಸ್' ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News