ಅಮೆರಿಕದ ಇಬ್ಬರು ವಿಜ್ಞಾನಿಗಳಿಗೆ ವೈದ್ಯಕೀಯ ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿ

Update: 2024-10-07 10:57 GMT

Image Credit: X/@NobelPrize

ಹೊಸದಿಲ್ಲಿ: 2024ರ ಸಾಲಿನ ವೈದ್ಯಕೀಯ ಕ್ಷೇತ್ರದ ನೊಬೆಲ್ ಬಹುಮಾನಕ್ಕೆ ಅಮೆರಿಕದ ವಿಜ್ಞಾನಿಗಳಾದ ವಿಕ್ಟರ್ ಅಂಬ್ರೋಸ್ ಮತ್ತು ಗ್ಯಾರಿ ರುವ್ಕುನ್ ಅವರನ್ನು ಆಯ್ಕೆ ಮಾಡಲಾಗಿದೆ.

ಜೀವಶಾಸ್ತ್ರ ಮತ್ತು ವೈದ್ಯಕೀಯ ವಿಭಾಗದಲ್ಲಿ ಮೈಕ್ರೋಆರ್ ಎನ್ ಎ(microRNA) ಆವಿಷ್ಕಾರ ಮತ್ತು ಜೀನ್ ನಿಯಂತ್ರಣದಲ್ಲಿ ಅದರ ಪಾತ್ರದ ಬಗ್ಗೆ ಆವಿಷ್ಕಾರಕ್ಕೆ ಈ ಬಾರಿಯ ನೊಬೆಲ್ ಬಹುಮಾನಕ್ಕೆ ಆಯ್ಕೆ ಮಾಡಲಾಗಿದೆ.

ನೊಬೆಲ್ ಪ್ರಶಸ್ತಿ ಆಯ್ಕೆ ಸಮಿತಿಯು ಸೋಮವಾರ ಸ್ವೀಡನ್ನಲ್ಲಿ ಪ್ರತಿಷ್ಟಿತ ಬಹುಮಾನವನ್ನು ಘೋಷಣೆ ಮಾಡಿದೆ. ಸ್ವೀಡನ್ನ ಕರೋಲಿನ್ಸ್ಕಾ ವೈದ್ಯಕೀಯ ವಿಶ್ವವಿದ್ಯಾಲಯದ ನೊಬೆಲ್ ಅಸೆಂಬ್ಲಿ ಪ್ರಶಸ್ತಿ ವಿಜೇತರನ್ನು ಆಯ್ಕೆ ಮಾಡುತ್ತದೆ. ಪ್ರಶಸ್ತಿ ಮೊತ್ತವು 1.1 ಮಿಲಿಯನ್ ಡಾಲರ್ ಬಹುಮಾನ ಮೊತ್ತವನ್ನು ಹೊಂದಿರುತ್ತದೆ.

ಆಂಬ್ರೋಸ್, ಮ್ಯಾಸಚೂಸೆಟ್ಸ್ ವೈದ್ಯಕೀಯ ವಿವಿಯಲ್ಲಿ ನೈಸರ್ಗಿಕ ವಿಜ್ಞಾನ ವಿಭಾಗದ ಪ್ರಾಧ್ಯಾಪಕರಾಗಿದ್ದರು. ರುವ್ಕುನ್ ಅವರು ಹಾರ್ವರ್ಡ್ ವೈದ್ಯಕೀಯ ಶಾಲೆಯಲ್ಲಿ ತಳಿಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News