ಚಿಲಿ: ಕಾಡ್ಗಿಚ್ಚಿಗೆ ಬಲಿಯಾದವರ ಸಂಖ್ಯೆ 131ಕ್ಕೇರಿಕೆ

Update: 2024-02-07 16:48 GMT

Photo: reuters.com

ವಿನಾ ಡೆಲ್ ಮಾರ್ (ಚಿಲಿ): ಕಳೆದ ಕೆಲವು ದಿನಗಳಿಂದ ಮಧ್ಯ ಚಿಲಿಯಲ್ಲಿ ತಾಂಡವವಾಡುತ್ತಿರುವ ಕಾಡ್ಗಿಚ್ಚಿಗೆ ಬಲಿಯಾದವರ ಸಂಖ್ಯೆ ಮಂಗಳವಾರ 131ಕ್ಕೇರಿದೆ. ಕಾಡ್ಗಿಚ್ಚಿನಿಂದ ತತ್ತರಿಸಿದ ಪ್ರದೇಶಗಳಲ್ಲಿ 300ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದು, ಅವರೆಲ್ಲರೂ ಜೀವಂತದಹನಗೊಂಡಿರಬಹುದೆಂಬ ಭೀತಿ ವ್ಯಕ್ತವಾಗಿದೆ.

2010ರಲ್ಲಿ ಭೂಕಂಪದ ಆನಂತರ ಚಿಲಿಯಲ್ಲಿ ಸಂಭವಿಸಿದ ಅತ್ಯಂತ ಭೀಕರವಾದ ದುರಂತ ಇದೆನ್ನಲಾಗಿದೆ. ಚಿಲಿಯ ಅಧ್ಯಕ್ಷ ಗೇಬ್ರಿಯಲ್ ಬೋರಿಕ್ ಅವರು ಮಂಗಳವಾರ ಕಾಡ್ಗಿಚ್ಚಿನಿಂದ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಿದರು. 2023ರ ಪಾನ್ ಅಮೆರಿಕನ್ ಗೇಮ್ಸ್ ಗೆ ಬಳಸಲಾದ ಪೀಠೋಪಕರಣಗಳನ್ನು ಕಾಡ್ಗಿಚ್ಚು ಸಂತ್ರಸ್ತರಿಗೆ ವಿತರಿಸಲಾಗುವುದು ಎಂದವರು ತಿಳಿಸಿದರು. 9200ಕ್ಕೂ ಅಧಿಕ ಸಂತ್ರಸ್ತ ಕುಟುಂಬಗಳ ನೀರಿನ ಶುಲ್ಕಗಳನ್ನು ಮನ್ನಾ ಮಾಡಲಾಗುವುದೆಂದು ತಿಳಿಸಿದರು.

ಮಧ್ಯಚಿಲಿಯ ಪರ್ವತಾಚ್ಛಾದಿತ ಬೀಚ್ ವಿಹಾರಧಾಮ ವಿನಾ ಡೆಲ್ಮೆರ್ನಲ್ಲಿ ನಡೆದ ಲ್ಯಾಟಿನ್ ಸಂಗಿತೋತ್ಸವದ ವೇಳೆ ಕಾಡ್ಗಿಚ್ಚು ಕಾಣಿಸಿಕೊಂಡಿತ್ತು. ಇತರ ಎರಡು ಪಟ್ಟಣಗಳಾದ ಕ್ವಿಲ್ಪೆ ಹಾಗೂ ವಿಲ್ಲಾ ಅಲೆಮಾನಾ ಕೂಡಾ ಕಾಡ್ಗಿಚ್ಚಿನಿಂದ ಸುಟ್ಟುಹೋಗಿವೆ. ಒಣ ಹವೆ ಹಾಗೂ ಬಲವಾದ ಗಾಳಿಯಿಂದಾಗಿ ಕಾಡ್ಗಿಚ್ಚು ವೇಗವಾಗಿ ಹರಡುತ್ತಿದೆ ಎಂದು ಹವಾಮಾನ ಇಲಾಖೆಯ ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News