ಅಂತರಿಕ್ಷದಲ್ಲಿ ಚೀನಾ ರಾಕೆಟ್ ಸ್ಫೋಟ | ಭೂಮಿಯ ಸುತ್ತ ಪರಿಭ್ರಮಿಸುತ್ತಿರುವ ಅವಶೇಷಗಳ ರಾಶಿ

Update: 2024-08-09 18:03 GMT

PC : NDTV 

ಕ್ಯಾಲಿಫೋರ್ನಿಯಾ : ಬಾಹ್ಯಾಕಾಶದಲ್ಲಿ ಚೀನಿ ರಾಕೆಟೊಂದು ಸ್ಫೋಟಗೊಂಡ ಆನಂತರ ಅದರ ಅವಶೇಷಗಳ ಬೃಹತ್ ‘ಮೋಡ’ವು ಭೂಮಿಯ ಸುತ್ತಲೂ ಪರಿಭ್ರಮಿಸುತ್ತಿವೆ. ಚೀನಾದ ‘ಲಾಂಗ್ಮಾರ್ಚ್ 6ಎ ’ರಾಕೆಟ್ ಮಂಗಳವಾರ 18 ಉಪಗ್ರಹಗಳನ್ನು ಹೊತ್ತೊಯ್ದಿದ್ದು, ಭೂಮಿಯಿಂದ 500 ಮೈಲು ದೂರದ ನಿಮ್ನ ಕಕ್ಷೆಯಲ್ಲಿ ಸ್ಥಾಪಿಸಿತ್ತು.

ಇದಾದ ಕೂಡಲೇ ರಾಕೆಟ್ನ ಮೇಲಿನ ಹಂತವು ಮುರಿದುಹೋಗಿದ್ದು, ಅದರ ಅವಶೇಷಗಳು ಅಂತರಿಕ್ಷದ ಎಲ್ಲೆಡೆ ಹರಡಿದ್ದವು. ರಾಕೆಟ್ನ 300ಕ್ಕೂ ಅಧಿಕ ಚೂರುಗಳು ಭೂಮಿಯ ನಿಮ್ನ ಕಕ್ಷೆಯಲ್ಲಿ ಸುತ್ತುತ್ತಿವೆಯೆಂದು ಅಮೆರಿಕದ ಅಂತರಿಕ್ಷ ಕಮಾಂಡ್ ಸಂಸ್ಥೆಯು ಹೇಳಿಕೆಯೊಂದರಲ್ಲಿ ತಿಳಿಸಿದೆ.

ಲಾಂಗ್ಮಾರ್ಚ್ 6ಎ ರಾಕೆಟ್ ಅನ್ನು 2024ರ ಆಗಸ್ಟ್ 6ರಂದು ಉಡಾವಣೆಗೊಳಿಸಿತ್ತು.

ಆದರೆ ಈ ರಾಕೆಟ್ ನ ಅವಶೇಷಗಳಿಂದ ಯಾವುದೇ ಅಪಾಯವಿಲ್ಲವೆಂದು ಅಮೆರಿಕ ಅಂತರಿಕ್ಷ ಕಮಾಂಡ್ ತಿಳಿಸಿದೆ

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News