ಟ್ರಂಪ್ ಸಲಹೆಗಾರರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ

Update: 2023-09-07 16:37 GMT

ಪೀಟರ್ ನವಾರೊ Photo: twitter/@RealPNavarro

ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿದ್ದ ಸಂದರ್ಭ ಶ್ವೇತಭವನದ ಸಲಹೆಗಾರನಾಗಿದ್ದ ಪೀಟರ್ ನವಾರೊ ವಿರುದ್ಧ ಸಂಸದೀಯ ಸಮಿತಿಯ ಆದೇಶವನ್ನು ಧಿಕ್ಕರಿಸಿದ ಹಿನ್ನೆಲೆಯಲ್ಲಿ 2 ಕೌಂಟ್‍ಗಳ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

ಕ್ಯಾಪಿಟಲ್ ಹಿಲ್ಸ್ ದಂಗೆ ಪ್ರಕರಣದ ತನಿಖೆಯಲ್ಲಿ ಸಹಕರಿಸುತ್ತಿಲ್ಲ. ತನಿಖೆ ನಡೆಸುತ್ತಿರುವ ಸಂಸದೀಯ ಸಮಿತಿಯನ್ನು ಧಿಕ್ಕರಿಸಿ ತಾನು ಕಾನೂನಿಗಿಂತ ಮೇಲು ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಪ್ರಕರಣದ ಅಭಿಯೋಜಕರು ಆರೋಪಿಸಿದ್ದರು.

2021ರ ಜನವರಿ 6ರಂದು ನಡೆದ ಕ್ಯಾಪಿಟಲ್ ಹಿಲ್ಸ್ ದಂಗೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಂಸದೀಯ ಸಮಿತಿಯ ಎದುರು ವಾದ ಮಂಡಿಸಿದ ಅಭಿಯೋಜಕ(ವ್ಯಾಜ್ಯದಾರ) ಜಾನ್ ಕ್ರ್ಯಾಬ್ `2021ರ ಅಧ್ಯಕ್ಷೀಯ ಚುನಾವಣೆಯಲ್ಲಿ ವಂಚನೆ ನಡೆದಿದೆ ಎಂಬ ಟ್ರಂಪ್ ಅವರ ಆಧಾರರಹಿತ ಪ್ರತಿಪಾದನೆಯನ್ನು ನವಾರೊ ಪುನರುಚ್ಚರಿಸಿದ್ದಾರೆ. ಆದ್ದರಿಂದ ಅವರನ್ನು ವಿಚಾರಣೆಗೆ ಒಳಪಡಿಸುವ ಅಗತ್ಯವಿದೆ.

ಆದರೆ ವಿಚಾರಣೆಗೆ ಹಾಜರಾಗುವಂತೆ ಸಮಿತಿ ನೀಡಿದ ಸೂಚನೆಯನ್ನು ನವಾರೊ ತಿರಸ್ಕರಿಸಿದ್ದಾರೆ. ವಿಚಾರಣೆಯಲ್ಲಿ ವೈಯಕ್ತಿಕ ಹಾಜರಾತಿಯಿಂದ ಟ್ರಂಪ್‍ಗೆ ವಿನಾಯಿತಿ ನೀಡಬೇಕೆಂದು ಆಗ್ರಹಿಸುತ್ತಿರುವ ನವಾರೊ ತಾನು ಕಾನೂನಿಗಿಂತ ಮಿಗಿಲು ಎಂಬಂತೆ ವರ್ತಿಸುತ್ತಿದ್ದಾರೆ' ಎಂದು ಹೇಳಿದರು.ಎರಡೂ ಕಡೆಯವರ ವಾದ-ಪ್ರತಿವಾದ ಆಲಿಸಿದ ಬಳಿಕ ಪೀಟರ್ ನವಾರೊ ವಿರುದ್ಧ 2 ಕೌಂಟ್‍ಗಳ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News