ಇರಾನ್ ನೌಕಾಪಡೆಗೆ ಅತ್ಯಾಧುನಿಕ ಕ್ಷಿಪಣಿಗಳ ನಿಯೋಜನೆ
Update: 2024-08-09 16:33 GMT
ಇರಾನ್ : ತನ್ನ ನೌಕಾಪಡೆಯು ಸ್ಫೋಟಕ ಸಿಡಿತಲೆಗಳೊಂದಿಗೆ ಸುಸಜ್ಜಿತವಾದ ನೂತನ ಕ್ರೂಸ್ ಕ್ಷಿಪಣಿಗಳನ್ನು ಹೊಂದಿರುವುದಾಗಿ ಇರಾನಿಯನ್ ರೆವೆಲ್ಯೂಶನರಿ ಗಾರ್ಡ್ಸ್ (ಐಆರ್ಜಿಸಿ) ಶುಕ್ರವಾರ ತಿಳಿಸಿದೆ.
ಜುಲೈ 31ರಂದು ಟೆಹರಾನ್ನಲ್ಲಿ ಹಮಾಸ್ ನಾಯಕ ಇಸ್ಮಾಯೀಲ್ ಹಾನಿಯೆಹ್ ಅವರ ಹತ್ಯೆಯ ಪ್ರತಿಕಾರ ತೀರಿಸುವುದಾಗಿ ಇರಾನ್ ಪ್ರತಿಜ್ಞೆಗೈದ ಬೆನ್ನಲ್ಲೇ ಐಆರ್ಜಿಸಿ ಈ ಘೋಷಣೆ ಮಾಡಿದೆ.
ವಿವಿಧ ಶ್ರೇಣಿಯ ದೀರ್ಘ ಹಾಗೂ ಮಧ್ಯಮ ವ್ಯಾಪ್ತಿಯ ಕ್ಷಿಪಣಿ ವ್ಯವಸ್ಥೆಗಳನ್ನು, ವಿಚಕ್ಷಣಾ ಡ್ರೋನ್ಗಳನ್ನು ಹಾಗೂ ನೌಕಾಪಡೆಯ ರಾಡಾರ್ಗಳನ್ನು ತನ್ನ ನೌಕಾಪಡೆಗೆ ಸೇರಿಸಲಾಗಿದೆ ಎಂದು ಐಆರ್ಜಿಸಿ ತಿಳಿಸಿದೆ.
ಇರಾನಿಯನ್ ನೌಕಾಪಡೆಯ ಹಲವಾರು ಶಸ್ತ್ರಾಸ್ತ್ರಗಳನ್ನು ಸರಕಾರಿ ಸ್ವಾಮ್ಯದ ಟೆಲಿವಿಶನ್ ಶುಕ್ರವಾರ ಪ್ರದರ್ಶಿಸಿದೆ. ಇರಾನ್ ದೇಶವು ಮಧ್ಯಪ್ರಾಚ್ಯದ ಅತ್ಯಂತ ಬೃಹತ್ ಕ್ಷಿಪಣಿ ಕಾರ್ಯಕ್ರಮಗಳನ್ನು ಹೊಂದಿದೆ.