ಭಾರತದಲ್ಲಿರುವ ಇಬ್ಬರು ಬಾಂಗ್ಲಾ ರಾಜತಾಂತ್ರಿಕರ ವಜಾ

Update: 2024-08-26 15:56 GMT

ಮುಹಮ್ಮದ್ ಯೂನಸ್ (PTI)

ಢಾಕಾ : ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಾಂಗ್ಲಾದೇಶದ ಇಬ್ಬರು ರಾಜತಾಂತ್ರಿಕರನ್ನು ಕರ್ತವ್ಯದಿಂದ ವಜಾಗೊಳಿಸಿ ಬಾಂಗ್ಲಾದ ಮಧ್ಯಂತರ ಸರಕಾರ ಆದೇಶ ಜಾರಿಗೊಳಿಸಿದೆ.

ಹೊಸದಿಲ್ಲಿಯಲ್ಲಿ ಬಾಂಗ್ಲಾದೇಶ ಹೈಕಮಿಷನ್ನಿ ಪ್ರಥಮ ಕಾರ್ಯದರ್ಶಿ(ಪತ್ರಿಕಾ) ಶಬಾನ್ ಮಹಮೂದ್ರಿಬಗೆ ರಾಜೀನಾಮೆ ನೀಡುವಂತೆ ಸೂಚಿಸಲಾಗಿದೆ. ಕೋಲ್ಕತಾದಲ್ಲಿರುವ ಬಾಂಗ್ಲಾದೇಶದ ಕಾನ್ಸುಲೇಟ್ನ ಲ್ಲಿ ಇದೇ ಹುದ್ದೆಯಲ್ಲಿರುವ ರಂಜನ್ ಸೇನ್‍ ರನ್ನೂ ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ವರದಿಯಾಗಿದೆ.

ಈ ಮಧ್ಯೆ, ಬಾಂಗ್ಲಾದೇಶದ ಅರೆಸೇನಾ ಪಡೆ ಹಾಗೂ ವಿದ್ಯಾರ್ಥಿಗಳ ನಡುವೆ ಢಾಕಾದ ಸಚಿವಾಲಯ ಕಚೇರಿ ಬಳಿ ಶನಿವಾರ ರಾತ್ರಿ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ಎರಡೂ ಕಡೆಯ ಹಲವರು ಗಾಯಗೊಂಡಿರುವುದಾಗಿ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News