ಡ್ರೋನ್ ಬಳಸಿ ಜೈಲಿನೊಳಗೆ ಮಾದಕವಸ್ತು ಸಾಗಾಟ: 11 ಮಂದಿ ಬಂಧನ

Update: 2024-02-20 16:18 GMT

ಸಾಂದರ್ಭಿಕ ಚಿತ್ರ | Photo: NDTV 

 

ವಾಷಿಂಗ್ಟನ್: ಅಮೆರಿಕದ ವೆಸ್ಟ್ ವರ್ಜೀನಿಯಾ ರಾಜ್ಯದ ಫೆಡರಲ್ ಜೈಲಿನೊಳಗೆ ಡ್ರೋನ್ ಮೂಲಕ ಮಾದಕವಸ್ತು ಸಾಗಿಸುವ ಪ್ರಕರಣದಲ್ಲಿ 11 ಶಂಕಿತರನ್ನು ಬಂಧಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

ಬಂಧಿತರಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕನೂ ಸೇರಿದ್ದಾನೆ. ಪೊಲೀಸರನ್ನು ಕಂಡು ಸ್ಥಳದಿಂದ ಪರಾರಿಯಾಗಿದ್ದ ಮತ್ತೊಬ್ಬ ವ್ಯಕ್ತಿ ಬಳಿಕ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ಮೆಕ್ಡೊವೆಲ್ ಕೌಂಟಿಯ ವೆಲ್ಶ್ ನಗರದಲ್ಲಿರುವ ಫೆಡರಲ್ ಜೈಲಿನ ಪ್ರದೇಶದಲ್ಲಿ ಡ್ರೋನ್ಗಳ ಹಾರಾಟ ಹೆಚ್ಚಿದೆ ಎಂದು ಸ್ಥಳೀಯರು ನವೆಂಬರ್ ನಲ್ಲಿ ಸ್ಥಳೀಯಾಡಳಿತಕ್ಕೆ ದೂರು ನೀಡಿದ್ದರು. ಈ ಬಗ್ಗೆ ತನಿಖೆ ನಡೆಸಿದಾಗ ಡ್ರೋನ್ ಮೂಲಕ ಜೈಲಿನೊಳಗೆ ಮಾದಕವಸ್ತು ಸಾಗಿಸುತ್ತಿರುವ ಬಗ್ಗೆ ಮಾಹಿತಿ ದೊರಕಿದೆ. ಕಳೆದ ವಾರ ಪ್ರಕರಣಕ್ಕೆ ಸಂಬಂಧಿಸಿ 11 ಶಂಕಿತರನ್ನು ಬಂಧಿಸಲಾಗಿದ್ದು ಓರ್ವ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಮೆಕ್ಡೊವೆಲ್ ಕೌಂಟಿಯ ಮುಖ್ಯಾಧಿಕಾರಿ ಜೇಮ್ಸ್ ಮುನ್ಸಿ ಹೇಳಿದ್ದಾರೆ.

ಪರಾರಿಯಾಗಿದ್ದ ಆರೋಪಿಯ ಮೃತದೇಹ ಜೈಲಿನಿಂದ ಸ್ವಲ್ಪ ದೂರದ ಪ್ರದೇಶದಲ್ಲಿ ಪತ್ತೆಯಾಗಿದೆ. ಬಂಧಿತರಲ್ಲಿ ಓರ್ವ ಅಪ್ರಾಪ್ತ ವಯಸ್ಕನಾಗಿದ್ದರೆ, ಇತರ ಮೂವರ ವಿರುದ್ಧ ಈಗಾಗಲೇ ಕ್ರಿಮಿನಲ್ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News