ಗ್ರೀಕ್ |ಅತಂತ್ರ ಸ್ಥಿತಿಯಲ್ಲಿದ್ದ 75 ವಲಸಿಗರ ರಕ್ಷಣೆ
ಅಥೆನ್ಸ್ : ಗ್ರೀಸ್‍ನ ನೈಋತ್ಯ ಕರಾವಳಿಯ ಬಳಿ ಹಾಯಿದೋಣಿಯಲ್ಲಿ ಅತಂತ್ರ ಸ್ಥಿತಿಯಲ್ಲಿ ಪತ್ತೆಯಾದ 75 ವಲಸಿಗರನ್ನು ರಕ್ಷಿಸಲಾಗಿದ್ದು ಅವರನ್ನು ಸಮೀಪದ ಪ್ರಮುಖ ಬಂದರಿಗೆ ಸ್ಥಳಾಂತರಿಸಲಾಗಿದೆ ಎಂದು ಗ್ರೀಕ್ ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ.
ಮಾಲ್ಟಾದ ಧ್ವಜ ಹೊಂದಿದ್ದ ದೋಣಿಯು ಪೈಲೋಸ್ ಪಟ್ಟಣದ ನೈಋತ್ಯದಲ್ಲಿ 112 ನಾಟಿಕಲ್ ಮೈಲುಗಳ ದೂರದಲ್ಲಿ ಮಂಗಳವಾರ ಕಂಡು ಬಂದಿದೆ. ಗ್ರೀಸ್‍ನ ಶೋಧ ಮತ್ತು ರಕ್ಷಣಾ ಪ್ರಾಧಿಕಾರದ ಸಂಘಟಿತ ಕಾರ್ಯಾಚರಣೆಯಲ್ಲಿ ದೋಣಿಯಲ್ಲಿದ್ದ ಎಲ್ಲರನ್ನೂ ವಿಹಾರ ನೌಕೆಯ ಮೂಲಕ ರಕ್ಷಿಸಲಾಗಿದ್ದು ದಕ್ಷಿಣ ಗ್ರೀಕ್‍ನ ಕಲಮಾತ ಬಂದರು ನಗರಕ್ಕೆ ಸ್ಥಳಾಂತರಿಸಲಾಗಿದೆ. ಯಾರಾದೂ ನಾಪತ್ತೆಯಾಗಿದ್ದಾರೆಯೇ ಎಂಬ ಬಗ್ಗೆ ಅಥವಾ ದೋಣಿಯಲ್ಲಿದ್ದವರ ರಾಷ್ಟ್ರೀಯತೆಯ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಮಧ್ಯಪ್ರಾಚ್ಯ, ಏಶ್ಯಾ ಮತ್ತು ಆಫ್ರಿಕಾದಿಂದ ಯುರೋಪಿಯನ್ ಯೂನಿಯನ್‍ನತ್ತ ವಲಸೆ ಹೋಗುವ ಅತ್ಯಂತ ಜನಪ್ರಿಯ ಸಮುದ್ರ ಮಾರ್ಗಗಳಲ್ಲಿ ಗ್ರೀಸ್ ಕರಾವಳಿ ಕೂಡಾ ಸೇರಿದೆ.