ಇಸ್ಮಾಯಿಲ್ ಹನಿಯೆಹ್ ಉತ್ತರಾಧಿಕಾರಿಯಾಗಿ ಯಹ್ಯಾ ಸಿನ್ವಾರ್ ಆಯ್ಕೆ: ಹಮಾಸ್ ಘೋಷಣೆ

Update: 2024-08-07 08:12 GMT

ಯಹ್ಯಾ ಸಿನ್ವಾರ್

ಫೆಲೆಸ್ತೀನ್:‌ ಹಮಾಸ್ ಗಾಝಾದಲ್ಲಿನ ತನ್ನ ಉನ್ನತ ಅಧಿಕಾರಿ ಯಹ್ಯಾ ಸಿನ್ವಾರ್ ಅವರನ್ನು ತನ್ನ ರಾಜಕೀಯ ಬ್ಯೂರೋದ ಹೊಸ ನಾಯಕ ಎಂದು ಘೋಷಿಸಿದೆ ಎಂದು Reuters ವರದಿ ಮಾಡಿದೆ.

ಜುಲೈ 31 ರಂದು ಇರಾನ್‌ ನ ಟೆಹ್ರಾನ್‌ನಲ್ಲಿ ಹಮಾಸ್‌ ನಾಯಕ ಇಸ್ಮಾಯಿಲ್ ಹನಿಯೆಹ್ ಅವರನ್ನು ಹತ್ಯೆಗೈಯಲಾಗಿದ್ದು, ಅವರ ಉತ್ತರಾಧಿಕಾರಿಯಾಗಿ ಸಿನ್ವಾರ್‌ ಅವರನ್ನು ಆಯ್ಕೆ ಮಾಡಲಾಗಿದೆ.

"ಇಸ್ಲಾಮಿಕ್ ರೆಸಿಸ್ಟೆನ್ಸ್ ಮೂವ್ಮೆಂಟ್ ಹಮಾಸ್ ಕಮಾಂಡರ್ ಯಹ್ಯಾ ಸಿನ್ವಾರ್ ಅವರನ್ನು ಚಳವಳಿಯ ರಾಜಕೀಯ ಬ್ಯೂರೋದ ಮುಖ್ಯಸ್ಥರನ್ನಾಗಿ, ಹುತಾತ್ಮ ಕಮಾಂಡರ್ ಇಸ್ಮಾಯಿಲ್ ಹನಿಯೆಹ್ ಅವರ ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಲಾಗಿದೆ" ಎಂದು ಹಮಾಸ್‌ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News