ಮೂವರು ಇಸ್ರೇಲಿ ಒತ್ತೆಯಾಳುಗಳ ಬಿಡುಗಡೆಗೊಳಿಸಿದ ಹಮಾಸ್

Update: 2025-02-01 20:52 IST
ಮೂವರು ಇಸ್ರೇಲಿ ಒತ್ತೆಯಾಳುಗಳ ಬಿಡುಗಡೆಗೊಳಿಸಿದ ಹಮಾಸ್

PC : NDTV 

  • whatsapp icon

ಗಾಝಾ : ಗಾಝಾ ಕದನ ವಿರಾಮ ಒಪ್ಪಂದದಡಿಯ ನಾಲ್ಕನೇ ವಿನಿಮಯ ಕಾರ್ಯಕ್ರಮದಡಿ ಶನಿವಾರ ಹಮಾಸ್ ಹೋರಾಟಗಾರರು ಮೂವರು ಇಸ್ರೇಲಿ ಒತ್ತೆಯಾಳುಗಳನ್ನು ಗಾಝಾ ನಗರದಲ್ಲಿ ರೆಡ್‍ಕ್ರಾಸ್ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.

ಹಸ್ತಾಂತರಗೊಳಿಸಿದ ಕೆಲ ಕ್ಷಣಗಳ ಬಳಿಕ `ಬಿಡುಗಡೆಗೊಂಡ ಒತ್ತೆಯಾಳುಗಳು, ಇಸ್ರೇಲಿ ಯೋಧರ ಬೆಂಗಾವಲಿನಲ್ಲಿ ಇಸ್ರೇಲಿ ಭೂಪ್ರದೇಶ ಪ್ರವೇಶಿಸಿದ್ದಾರೆ' ಎಂದು ಇಸ್ರೇಲ್ ಮಿಲಿಟರಿ ದೃಢಪಡಿಸಿದೆ. ಜನವರಿ 19ರಂದು ಜಾರಿಗೆ ಬಂದಿರುವ ಕದನ ವಿರಾಮ ಒಪ್ಪಂದವು ಗಾಝಾದಲ್ಲಿನ ಮಾರಣಾಂತಿಕ ಸಂಘರ್ಷವನ್ನು ಅಂತ್ಯಗೊಳಿಸುವ ಮತ್ತು ಗಾಝಾಕ್ಕೆ ಹೆಚ್ಚಿನ ಮಾನವೀಯ ನೆರವಿನ ಪೂರೈಕೆಗೆ ಅವಕಾಶ ಮಾಡಿಕೊಡುವ ಗುರಿ ಹೊಂದಿದೆ. ಒಪ್ಪಂದದ ಭಾಗವಾಗಿ ಇಸ್ರೇಲ್‍ನ 33 ಒತ್ತೆಯಾಳುಗಳಿಗೆ ಪ್ರತಿಯಾಗಿ ಇಸ್ರೇಲ್ ಬಂಧಿಸಿರುವ ಸುಮಾರು 2000 ಫೆಲೆಸ್ತೀನಿಯನ್ ಕೈದಿಗಳ ಬಿಡುಗಡೆಗೊಳಿಸಲಾಗುವುದು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News