ಭೂಗತ ಬಂಕರ್ ನಲ್ಲಿ ವಿಷಕಾರಿ ಹೊಗೆಯಿಂದ ಉಸಿರುಗಟ್ಟಿ ಹಸನ್ ನಸ್ರುಲ್ಲಾ ಮೃತ್ಯು : ವರದಿ

Update: 2024-10-01 14:58 GMT

ಹಸನ್ ನಸ್ರುಲ್ಲಾ | PC : NDTV

ಟೆಲ್ ಅವೀವ್ : ಸೆಪ್ಟಂಬರ್ 27ರ ರಾತ್ರಿ ಲೆಬನಾನ್‍ನ ಬೈರುತ್ ಮೇಲೆ ಇಸ್ರೇಲ್ ನಡೆಸಿದ ಭೀಕರ ಬಾಂಬ್ ದಾಳಿಯ ಬಳಿಕ ವಿಷಕಾರಿ ಹೊಗೆ ಭೂಗತ ಬಂಕರ್‍ಗೆ ನುಗ್ಗಿದ್ದರಿಂದ ಬಂಕರ್‍ನಲ್ಲಿದ್ದ ಹಿಜ್ಬುಲ್ಲಾ ಮುಖಂಡ ಹಸನ್ ನಸ್ರುಲ್ಲಾ ಉಸಿರುಗಟ್ಟಿ ಮೃತಪಟ್ಟಿರುವುದಾಗಿ ಇಸ್ರೇಲ್ ಮಾಧ್ಯಮಗಳು ವರದಿ ಮಾಡಿವೆ.

ನಸ್ರುಲ್ಲಾ ಅಡಗುತಾಣವನ್ನು ಗುರುತಿಸಿ 80 ಟನ್‍ಗಳಷ್ಟು ಬಂಕರ್ ಸ್ಫೋಟಕ ಬಾಂಬ್‍ಗಳನ್ನು ಇಸ್ರೇಲ್ ಯುದ್ಧವಿಮಾನಗಳು ಹಾಕಿವೆ. ಸ್ಫೋಟದಿಂದ ಬಿಡುಗಡೆಗೊಂಡ ವಿಷಕಾರಿ ಹೊಗೆ ಬಂಕರ್‍ನೊಳಗೆ ನುಗ್ಗಿ ಉಸಿರಾಟ ಸಾಧ್ಯವಾಗದೆ ನಸ್ರುಲ್ಲಾ ಮೃತಪಟ್ಟಿರುವುದಾಗಿ ವರದಿ ಹೇಳಿದೆ.

ನಸ್ರುಲ್ಲಾ ಅವರ ಮೃತದೇಹದಲ್ಲಿ ಯಾವುದೇ ಬಾಹ್ಯ ಗಾಯಗಳು ಕಂಡುಬಂದಿಲ್ಲ. ಆದ್ದರಿಂದ ಅವರು ಭಾರೀ ಆಘಾತದಿಂದ ಮೃತಪಟ್ಟಿರುವ ಸಾಧ್ಯತೆ ಹೆಚ್ಚಿದೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News