ಆಸ್ಟ್ರೇಲಿಯಾ: ಹೋಟೆಲ್ ಮೇಲ್ಚಾವಣಿಗೆ ಬಡಿದ ಹೆಲಿಕಾಪ್ಟರ್, ಪೈಲಟ್‌ ಮೃತ್ಯು

Update: 2024-08-12 06:08 GMT

Screengrab: X/ @upuknews1

ಸಿಡ್ನಿ: ಹೆಲಿಕಾಪ್ಟರ್ ಒಂದು ಹೋಟೆಲ್ ಒಂದರ ಮೇಲ್ಚಾವಣಿಗೆ ಅಪ್ಪಳಿಸಿರುವ ಘಟನೆ ಉತ್ತರ ಆಸ್ಟ್ರೇಲಿಯಾದಲ್ಲಿ ನಡೆದಿದೆ. ಈ ಅಪಘಾತದಲ್ಲಿ ಪೈಲಟ್ ಮೃತಪಟ್ಟಿದ್ದು, ಹೋಟೆಲ್ ನ ನೂರಾರು ಅತಿಥಿಗಳನ್ನು ತೆರವುಗೊಳಿಸಲಾಗಿದೆ.

ಸೋಮವಾರ ಬೆಳಗ್ಗೆ ಉತ್ತರ ಆಸ್ಟ್ರೇಲಿಯಾದ ಕೇರ್ನ್ಸ್ ನಲ್ಲಿರುವ ಹಿಲ್ಟನ್ ಡಬಲ್ ಟ್ರೀ ಹೋಟೆಲ್ ನ ಮೇಲ್ಚಾವಣಿಗೆ ಹೆಲಿಕಾಪ್ಟರ್ ಒಂದು ಅಪ್ಪಳಿಸಿದೆ. ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ತುರ್ತು ಸೇವೆಗಳು ಧಾವಿಸಿವೆ. ಟ್ವಿನ್ ಎಂಜಿನ್ ಹೊಂದಿದ್ದ ಹೆಲಿಕಾಪ್ಟರ್ ಹೋಟೆಲ್ ನ ಮೇಲ್ಚಾವಣಿಗೆ ಅಪ್ಪಳಿಸಿದ್ದರಿಂದ ಬೆಂಕಿಯ ಜ್ವಾಲೆ ವ್ಯಾಪಿಸಿದೆ. ಹೀಗಾಗಿ ಹೋಟೆಲ್ ನಲ್ಲಿದ್ದವರನ್ನು ತೆರವುಗೊಳಿಸಲಾಯಿತು ಎಂದು ಕ್ವೀನ್ಸ್ ಲ್ಯಾಂಡ್ ರಾಜ್ಯ ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳದಲ್ಲೇ ಹೆಲಿಕಾಪ್ಟರ್ ಪೈಲಟ್ ಮೃತಪಟ್ಟಿದ್ದಾನೆ ಎಂದು ಅಧಿಕೃತವಾಗಿ ದೃಢಪಡಿಸಲಾಗಿದೆ.

ಹೋಟೆಲ್ ನಲ್ಲಿದ್ದ ಯಾರಿಗೂ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News