ಗಾಝಾ ಕರಾವಳಿಗೆ ಆಸ್ಪತ್ರೆ ಹಡಗು ರವಾನೆ : ಇಟಲಿ
Update: 2023-11-09 22:52 IST

Photo- PTI
ರೋಮ್ : ಇಸ್ರೇಲ್-ಹಮಾಸ್ ಸಂಘರ್ಷದಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ಒದಗಿಸಲು ಅನುಕೂಲವಾಗುವಂತೆ ಗಾಝಾ ಕರಾವಳಿಯಗೆ ಆಸ್ಪತ್ರೆ ಹಡಗನ್ನು ಕಳುಹಿಸುವುದಾಗಿ ಇಟಲಿ ಗುರುವಾರ ಹೇಳಿದೆ.
ವೈದ್ಯಕೀಯ ತುರ್ತುಚಿಕಿತ್ಸೆಯ ತರಬೇತಿ ಪಡೆದ 30 ಮಂದಿ ಸೇರಿದಂತೆ 170 ಸಿಬ್ಬಂದಿಗಳಿರುವ ಹಡಗು ಪಶ್ಚಿಮ ಇಟಲಿಯ ಸಿವಿಟವೆಷಿಯಾ ಬಂದರಿನಿಂದ ಬುಧವಾರ ಹೊರಟಿದೆ. ಮುಂದಿನ ದಿನಗಳಲ್ಲಿ ಗಾಝಾಕ್ಕೆ ಸಂಚಾರಿ ಚಿಕಿತ್ಸಾಲಯವನ್ನು ರವಾನಿಸಲಾಗುವುದು. ಈ ಪ್ರದೇಶಕ್ಕೆ ನಮ್ಮ ನೌಕಾದಳದ ಎರಡು ಹಡಗುಗಳನ್ನು ಈಗಾಗಲೇ ರವಾನಿಸಲಾಗಿದೆ ಎಂದು ಇಟಲಿ ರಕ್ಷಣಾ ಸಚಿವ ಗಿರ್ಡೋ ಕ್ರಾಸೆಟೊ ಹೇಳಿದ್ದಾರೆ.