ಆಕ್ಸ್‌ ಫರ್ಡ್ ವಿವಿ ಕುಲಪತಿ ಚುನಾವಣೆಗೆ ಇಮ್ರಾನ್ ಸ್ಪರ್ಧೆ : ವರದಿ

Update: 2024-07-26 17:36 GMT

ಇಮ್ರಾನ್‌ ಖಾನ್‌ (Photo: PTI)

ಇಸ್ಲಾಮಾಬಾದ್ : ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ಖಾನ್ ಅವರು ಬ್ರಿಟನ್‌ನ ಆಕ್ಸ್‌ ಫರ್ಡ್ ವಿವಿ ಕುಲಪತಿ ಹುದ್ದೆಗೆ ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಅವರ ನಿಕಟವರ್ತಿಗಳು ಮತ್ತು ಮಾಧ್ಯಮಗಳು ವರದಿ ಮಾಡಿವೆ.

ಆಕ್ಸ್‌ ಫರ್ಡ್ ನ ಕೆಬ್ಲೆ ಕಾಲೇಜಿನಲ್ಲಿ ಇಮ್ರಾನ್‌ಖಾನ್ 1972ರಲ್ಲಿ ರಾಜಕೀಯ ಮತ್ತು ಅರ್ಥಶಾಸ್ತ್ರದ ವಿದ್ಯಾರ್ಥಿಯಾಗಿದ್ದರು. ಜೊತೆಗೆ ಆಕ್ಸ್‌ ಫರ್ಡ್ ವಿವಿಯ ಕ್ರಿಕೆಟ್ ತಂಡದ ನಾಯಕನಾಗಿದ್ದರು. 2005ರಿಂದ 2014ರವರೆಗೆ ಅವರು ಬ್ರಾಡ್‌ಫೋರ್ಡ್ ವಿವಿಯ ಕುಲಪತಿಯಾಗಿ ಕಾರ್ಯನಿರ್ವಹಿಸಿದ್ದರು. ಇದೇ ಪ್ರಥಮ ಬಾರಿಗೆ ಆಕ್ಸ್‌ ಫರ್ಡ್ ವಿವಿಯ ಕುಲಪತಿ ಚುನಾವಣೆ ಆನ್‌ಲೈನ್‌ಲ್ಲಿ ನಡೆಯುತ್ತಿದೆ. ಇಮ್ರಾನ್ ಆನ್‌ಲೈನ್‌ನಲ್ಲೇ ನಾಮಪತ್ರ ಸಲ್ಲಿಸಿ ಸ್ಪರ್ಧಿಸಲಿದ್ದಾರೆ ಎಂದು ಬ್ರಿಟನ್‌ನ `ದಿ ಟೆಲಿಗ್ರಾಫ್' ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News