ಯುನೆಸ್ಕೋದ `ಅಮೂರ್ತ ಪರಂಪರೆ' ಪಟ್ಟಿಗೆ ಇಫ್ತಾರ್ ಸೇರ್ಪಡೆ

Update: 2023-12-06 17:04 GMT

Photo: Canva

ಪ್ಯಾರಿಸ್: ವಿಶ್ವಸಂಸ್ಥೆ ಸಾಂಸ್ಕೃತಿಕ ಸಂಸ್ಥೆ(ಯುನೆಸ್ಕೋ)ಯ ಅಮೂರ್ತ ಪರಂಪರೆ ಪಟ್ಟಿಗೆ `ಇಫ್ತಾರ್' ಸೇರ್ಪಡೆಗೊಳಿಸುವ ಪ್ರಸ್ತಾವನೆಗೆ ಯುನೆಸ್ಕೋ ಅಂಗೀಕಾರ ನೀಡಿದೆ ಎಂದು ವರದಿಯಾಗಿದೆ.

ಮುಸ್ಲಿಮರ ಪವಿತ್ರ ರಂಜಾನ್ ತಿಂಗಳಿನಲ್ಲಿ ಹಗಲಿನ ಉಪವಾಸವನ್ನು ಮುರಿಯುವ `ಇಫ್ತಾರ್' ಊಟವನ್ನು ಯುನೆಸ್ಕೋ ಪಟ್ಟಿಗೆ ಸೇರಿಸಲು ಅಝರ್‍ಬೈಜಾನ್, ಇರಾನ್, ಉಜ್ಬೇಕಿಸ್ತಾನ ಮತ್ತು ಟರ್ಕಿಗಳು ಒಟ್ಟಾಗಿ ಬಿಡ್ ಸಲ್ಲಿಸಿದ್ದವು. `ಮುಸ್ಲಿಮರು ರಂಜಾನ್ ತಿಂಗಳಲ್ಲಿ ಸೂರ್ಯಾಸ್ತದ ಸಮಯದಲ್ಲಿ ಎಲ್ಲಾ ಧಾರ್ಮಿಕ ಮತ್ತು ವಿಧ್ಯುಕ್ತ ವಿಧಿಗಳನ್ನು ಪೂರ್ಣಗೊಳಿಸಿದ ನಂತರ `ಇಫ್ತಾರ್' ಆಚರಿಸುತ್ತಾರೆ' ಎಂದು ಯುನೆಸ್ಕೋ ಹೇಳಿಕೆ ಉಲ್ಲೇಖಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News