ಯುರೇನಿಯಂನ ದಾಸ್ತಾನನ್ನು ಇರಾನ್ ಹೆಚ್ಚಿಸಿದೆ : ಅಂತಾರಾಷ್ಟ್ರೀಯ ಅಣುಶಕ್ತಿ ಏಜೆನ್ಸಿ

Update: 2024-08-29 17:27 GMT

PC:X/@iaeaorg

ವಿಯೆನ್ನಾ : ಅಂತಾರಾಷ್ಟ್ರೀಯ ಒತ್ತಡವನ್ನು ಉಲ್ಲಂಘಿಸಿರುವ ಇರಾನ್ ಅಣ್ವಸ್ತ್ರ ತಯಾರಿಕೆಗೆ ಗುಣಮಟ್ಟ ಹೊಂದಿರುವ ಸಂವರ್ಧಿತ ಯುರೇನಿಯಂನ ದಾಸ್ತಾನನ್ನು ಹೆಚ್ಚಿಸಿದೆ ಎಂದು ಎಂದು ವಿಶ್ವಸಂಸ್ಥೆಯ ಪರಮಾಣು ಕಾವಲು ಸಂಸ್ಥೆ ‘ಅಂತರರಾಷ್ಟೀಯ ಅಣುಶಕ್ತಿ ಏಜೆನ್ಸಿ’ (ಐಎಇಎ) ತಿಳಿಸಿದೆ.

ಇರಾನ್ ಪ್ರಸಕ್ತ 164.7 ಕಿ.ಗ್ರಾಂ. (363.1 ಪೌಂಡ್) ಸಂವರ್ಧಿತ ಯುರೇನಿಯಂ ಅನ್ನು ಹೊಂದಿದ್ದು, ಅದರಲ್ಲಿ ಶೇ.60ರಷ್ಟು ಪರಿಶುದ್ಧತೆಯನ್ನು ಹೊಂದಿದೆ. ಅಣ್ವಸ್ತ್ರ ತಯಾರಿಕೆಗೆ ಯೋಗ್ಯವಾದ ಯುರೇನಿಯಂನ ದಾಸ್ತಾನು ಪ್ರಮಾಣದಲ್ಲಿ ಕಳೆದ ಮೇನಲ್ಲಿ ವರದಿಯಾಗಿದ್ದಕ್ಕಿಂತ ಈಗ 22.6 ಕಿ.ಗ್ರಾಂ. (49.8 ಪೌಂಡ್)ಗಳಷ್ಟು ಹೆಚ್ಚವಾಗಿದೆ ಎಂದು ಐಎಇಎ ವರದಿ ತಿಳಿಸಿದೆ.

ಇರಾನ್‌ ದಾಸ್ತಾನುಗೊಳಿಸಿರುವ ಸಂವರ್ಧಿತ ಯುರೇನಿಯಂನ ಪರಿಶುದ್ಧತೆಯು ಈಗ ಶೇ. 60ಕ್ಕೇರಿದೆ. ಅಣ್ವಸ್ತ್ರಗಳ ತಯಾರಿಗೆ ಶೇ.90ರಷ್ಟು ಪರಿಶುದ್ಧತೆಯ ಸಂವರ್ಧಿತ ಯುರೇನಿಯಂನ ಅಗತ್ಯವಿರುತ್ತದೆ ಎಂದು ಐಎಇಎ ತಿಳಿಸಿದೆ.

ತನ್ನ ಪರಮಾಣು ಕಾರ್ಯಕ್ರಮವನ್ನು ಪರಮಾಣು ನಿರೀಕ್ಷಕರು ಕಣ್ಗಾವಲು ನಡೆಸುವುದನ್ನು ನಿಷೇಧಿಸುವ ತನ್ನ ನಿರ್ಧಾರವನ್ನು ಇರಾನ್ ಮರುಪರಿಶೀಲಿಸಿಲ್ಲ. ಪರಮಾಣು ಸ್ಥಾವರದಲ್ಲಿ ಐಎಇಎನ ಕಣ್ಗಾವಲು ಕ್ಯಾಮರಾಗಳನ್ನು ನಿರ್ಬಂಧಿಸಲಾಗಿದೆ ಎಂದು ಐಎಇಎ ವರದಿಯಲ್ಲಿ ಆಪಾದಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News