ಕುವೈತ್‌ ಬಳಿ ಮುಳುಗಿದ ಇರಾನ್ ಹಡಗು | ಭಾರತೀಯರ ಸಹಿತ 6 ಮಂದಿ ಮೃತ್ಯು

Update: 2024-09-03 18:03 GMT

ಸಾಂದರ್ಭಿಕ ಚಿತ್ರ 

ಟೆಹ್ರಾನ್ : ಕುವೈತ್‌ ಬಳಿಯ ಸಮುದ್ರದಲ್ಲಿ ಇರಾನ್‍ನ ವಾಣಿಜ್ಯ ಹಡಗೊಂದು ಮುಳುಗಿದ್ದು ಹಡಗಿನ 6 ಸಿಬ್ಬಂದಿ ಮೃತಪಟ್ಟಿರುವುದಾಗಿ ಇರಾನ್ ಅಧಿಕಾರಿಗಳನ್ನು ಉಲ್ಲೇಖಿಸಿ ಇರ್ನಾ ಸುದ್ದಿಸಂಸ್ಥೆ ಮಂಗಳವಾರ ವರದಿ ಮಾಡಿದೆ.

ಮುಳುಗಿದ ಹಡಗಿನಲ್ಲಿದ್ದ ಭಾರತೀಯ ಮತ್ತು ಇರಾನ್ ಪ್ರಜೆಗಳು ಸೇರಿದಂತೆ 6 ಸಿಬ್ಬಂದಿಗಳು ಮೃತಪಟ್ಟಿದ್ದಾರೆ. ಮೂವರ ಮೃತದೇಹಗಳನ್ನು ಪತ್ತೆಹಚ್ಚುವ ಕಾರ್ಯ ಮುಂದುವರಿದಿದೆ ಎಂದು ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News