ಮಹ್ಸಾ ಅಮೀನಿ ಸಾವಿನ ವಾರ್ಷಿಕ ದಿನದಂದು ಇರಾನ್ ಯೋಧನ ಹತ್ಯೆ

Update: 2023-09-17 17:47 GMT

Photo: NDTV

ಟೆಹ್ರಾನ್ : ಮಹ್ಸಾ ಅಮೀನಿಯ ಸಾವಿನ ವಾರ್ಷಿಕ ದಿನದಂದು ಇರಾನ್‍ನ ಅರೆಸೇನಾ ಪಡೆಯ ಸದಸ್ಯನೊಬ್ಬ ಗುಂಡೇಟಿನಿಂದ ಮೃತಪಟ್ಟಿರುವುದಾಗಿ ಸರಕಾರಿ ಸ್ವಾಮ್ಯದ ಇರ್ನಾ ಸುದ್ಧಿಸಂಸ್ಥೆ ವರದಿ ಮಾಡಿದೆ.

2022ರ ಸೆಪ್ಟಂಬರ್ 16ರಂದು 22 ವರ್ಷದ ಕುರ್ಡ್ ಸಮುದಾಯದ ಯುವತಿ ಅಮೀನಿ ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟಿದ್ದು ಇದನ್ನು ಖಂಡಿಸಿ ಹಲವು ತಿಂಗಳು ದೇಶದಾದ್ಯಂತ ಪ್ರತಿಭಟನೆ ನಡೆದಿತ್ತು. ಈ ದುರಂತದ ವಾರ್ಷಿಕ ದಿನದಂದು ದಕ್ಷಿಣ ಫಾರ್ಸ್ ಪ್ರಾಂತದಲ್ಲಿ ಇಬ್ಬರು ಅಪರಿಚಿತ ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಇಸ್ಲಾಮಿಕ್ ರೆವೊಲ್ಯುಷನರಿ ಗಾರ್ಡ್‍ನೊಂದಿಗೆ ಸಂಪರ್ಕ ಹೊಂದಿರುವ ಇರಾನ್‍ನ ಬಾಸಿಜ್ ಅರೆಸೇನಾ ಪಡೆಯ ಯೋಧ ಮೃತಪಟ್ಟಿದ್ದು ಇತರ ಮೂವರು ಗಾಯಗೊಂಡಿದ್ದಾರೆ. ಗುಂಡಿನ ದಾಳಿ ನಡೆಸಿದ ದುಷ್ಕರ್ಮಿಗಳು ಪರಾರಿಯಾಗಿದ್ದು ಅವರ ಪತ್ತೆಗೆ ಗುಪ್ತಚರ ದಳ, ಭದ್ರತಾ ದಳ ಮತ್ತು ಕಾನೂನು ಜಾರಿ ಏಜೆನ್ಸಿಗಳು ಜಂಟಿ ಕಾರ್ಯಾಚರಣೆ ಆರಂಭಿಸಿವೆ ಎಂದು ವರದಿ ಹೇಳಿದೆ.

ಈ ಮಧ್ಯೆ, ಪ್ರಕರಣಕ್ಕೆ ಸಂಬಂಧಿಸಿ ಅವಳಿ ಪೌರತ್ವ ಹೊಂದಿರುವ ವ್ಯಕ್ತಿಯೊಬ್ಬನನ್ನು ಟೆಹ್ರಾನ್‍ನ ಪಶ್ಚಿಮದಲ್ಲಿರುವ ಕರಾಜ್ ನಗರದಲ್ಲಿ ಬಂಧಿಸಲಾಗಿದೆ ಎಂದು ರೆವೊಲ್ಯುಷನರಿ ಗಾಡ್ರ್ಸ್ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News