ಇರಾಕ್‌ ಬಗ್ಗೆ ಸುಳ್ಳು ಹೇಳಿದವರು ಗಾಝಾ ಬಗ್ಗೆ ಸತ್ಯ ಹೇಳುತ್ತಾರೆಯೇ?: ಅಮೆರಿಕ ವಿರುದ್ಧ ಹೆಚ್ಚಾಯ್ತು ಆಕ್ರೋಶ

Update: 2023-10-19 12:23 GMT

Photo: twitter/jacksonhinklle

ವಾಷಿಂಗ್ಟನ್:‌ ಗಾಝಾ ಪಟ್ಟಿಯ ಆಸ್ಪತ್ರೆ ಮೇಲೆ ನಡೆಸಿದ ದಾಳಿಯಲ್ಲಿ ತನ್ನ ಕೈವಾಡವಿಲ್ಲ ಎಂದು ಹೇಳಿರುವ ಇಸ್ರೇಲ್‌ ವಾದವನ್ನು ಬೆಂಬಲಿಸಿರುವ ಅಮೆರಿಕಾದ ನಿಲುವಿನ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ. ಅಮೆರಿಕನ್ನರೇ ಜೋ ಬೈಡನ್‌ ಸರ್ಕಾರದ ಬಗ್ಗೆ ತಮ್ಮ ಅನುಮಾನಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಗಾಝಾ ಆಸ್ಪತ್ರೆ ಮೇಲಿನ ದಾಳಿಯಲ್ಲಿ ನಮ್ಮ ಕೈವಾಡವಿಲ್ಲವೆಂದು ಪ್ರತಿಪಾದಿಸಿದ್ದ ಇಸ್ರೇಲ್‌ ಹೇಳಿಕೆಯನ್ನು ಸಮರ್ಥಿಸಿದ್ದ ಜೋ ಬೈಡನ್‌, ಗಾಝಾ ಆಸ್ಪತ್ರೆ ಮೇಲಿನ ದಾಳಿಯಲ್ಲಿ ಇಸ್ರೇಲ್‌ ಕೈವಾಡವಿಲ್ಲ ಎಂದು ಹೇಳಿದ್ದರು.

ಆದರೆ, ಈ ಪ್ರತಿಪಾದನೆಗೆ ಹಲವಾರು ಮಂದಿ ಆಕ್ಷೇಪ ವ್ಯಕ್ತಪಡಿಸಿದ್ದು, ಇರಾಕ್‌, ಅಫ್ಘಾನಿಸ್ತಾನದ ಮೇಲೆ ದಾಳಿ ನಡೆಸಲು ಸುಳ್ಳುಗಳನ್ನು ಹೇಳಿದ್ದವರು ಗಾಝಾ ಬಗ್ಗೆ ಸತ್ಯ ಹೇಳುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.

ಇಸ್ರೇಲ್‌ ಗಾಝಾದ ಆಸ್ಪತ್ರೆಗಳ ಮೇಲೆ ದಶಕಗಳಿಂದ ದಾಳಿ ಮಾಡುತ್ತಾ ಬರುತ್ತಿದೆ, ಹಲವಾರು ಬಾರಿ ಇಸ್ರೇಲ್‌ ಆಸ್ಪತ್ರೆಗಳನ್ನೇ ಗುರಿ ಮಾಡಿ ದಾಳಿ ನಡೆಸಿದೆ ಎಂದು ಜಾಗತಿಕ ರಾಜಕಾರಣದ ವಿಶ್ಲೇಷಕ ಜಾಕ್ಸನ್‌ ಹಿಂಕಲ್‌ ಪ್ರತಿಪಾದಿಸಿದ್ದಾರೆ.

ಮಿಲಿಯನ್‌ ಗೂ ಅಧಿಕ ಫಾಲೋವರ್ಸ್‌ ಗಳಿರುವ ತಮ್ಮ X (ಹಿಂದಿನ ಟ್ವಿಟರ್)‌ ಖಾತೆಯಲ್ಲಿ ಅವರು ಈ ಬಗ್ಗೆ ಹಲವಾರು ಪೋಸ್ಟ್‌ಗಳನ್ನು ಹಂಚಿಕೊಂಡಿದ್ದು, ಇಸ್ರೇಲ್‌ ನಿಜವಾದ ಭಯೋತ್ಪಾದಕ ರಾಷ್ಟ್ರ ಎಂದು ಅವರು ಪ್ರತಿಪಾದಿಸಿದ್ದಾರೆ.

ಗಾಝಾ ಆಸ್ಪತ್ರೆ ಮೇಲಿನ ದಾಳಿಗೂ ಮುನ್ನವೇ ಗಾಝಾ ಬ್ಯಾಪ್ಟಿಸ್ಟ್ ಆಸ್ಪತ್ರೆಯ ಮೇಲಿನ ದಾಳಿಯ ಬಗ್ಗೆ ಜೆರುಸಲೆಮ್‌ನಲ್ಲಿರುವ ಇವಾಂಜೆಲಿಕಲ್ ಚರ್ಚ್ ಮೊದಲೇ ಇಸ್ರೇಲ್‌ನಿಂದ 3 ಎಚ್ಚರಿಕೆ ಕರೆಗಳನ್ನು ಸ್ವೀಕರಿಸಿತ್ತು ಎಂದು ಅವರು ಪ್ರತಿಪಾದಿಸಿದ್ದಾರೆ.

“ಇರಾಕ್ ಬಗ್ಗೆ ಅಮೆರಿಕ ಸುಳ್ಳು ಹೇಳಿದೆ. ಸಿರಿಯಾ ಬಗ್ಗೆ ಅಮೆರಿಕ ಸುಳ್ಳು ಹೇಳಿದೆ. ಲಿಬಿಯಾದ ಬಗ್ಗೆ ಅಮೆರಿಕ ಸುಳ್ಳು ಹೇಳಿದೆ. ಕುವೈತ್ ಬಗ್ಗೆ ಅಮೆರಿಕ ಸುಳ್ಳು ಹೇಳಿದೆ. ಯುಎಸ್ ಉಕ್ರೇನ್ ಬಗ್ಗೆ ಸುಳ್ಳು ಹೇಳಿದೆ. ಅಫ್ಘಾನಿಸ್ತಾನದ ಬಗ್ಗೆ ಅಮೆರಿಕ ಸುಳ್ಳು ಹೇಳಿದೆ. ಆದರೆ ಅವರು ನಮಗೆ ಇಸ್ರೇಲ್ ಮತ್ತು ಗಾಝಾದ ಬಗ್ಗೆ ಸತ್ಯವನ್ನು ಹೇಳುತ್ತಿದ್ದಾರೆ ಎಂದು ನೀವು ಭಾವಿಸುತ್ತೀರಾ? ಎದ್ದೇಳಿ, ಯುದ್ಧ ಅಪರಾಧಿಗಳು ಮತ್ತೆ ಸುಳ್ಳು ಹೇಳುತ್ತಿದ್ದಾರೆ!” ಎಂದು ಜಾಕ್ಸನ್‌ ಹಿಂಕಲ್‌ ಟ್ವೀಟ್‌ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News