ಇಸ್ರೇಲ್‌ನಿಂದ ಕದನ ವಿರಾಮ ಉಲ್ಲಂಘನೆ: ಹಮಾಸ್ ನಿಂದ ಒತ್ತೆಯಾಳುಗಳ ಬಿಡುಗಡೆ ತಡೆಹಿಡಿದಿರುವುದಾಗಿ ಘೋಷಣೆ

Update: 2025-02-11 23:37 IST
ಇಸ್ರೇಲ್‌ನಿಂದ ಕದನ ವಿರಾಮ ಉಲ್ಲಂಘನೆ: ಹಮಾಸ್ ನಿಂದ ಒತ್ತೆಯಾಳುಗಳ ಬಿಡುಗಡೆ ತಡೆಹಿಡಿದಿರುವುದಾಗಿ ಘೋಷಣೆ

ಸಾಂದರ್ಭಿಕ ಚಿತ್ರ

  • whatsapp icon

ಗಾಝಾ: ಇಸ್ರೇಲ್ ಕದನವಿರಾಮ ಉಲ್ಲಂಘನೆಯನ್ನು ಮುಂದುವರಿಸಿದೆಯೆಂದು ಫೆಲೆಸ್ತೀನ್ ಹೋರಾಟಗಾರ ಸಂಘಟನೆ ಹಮಾಸ್ ಆಪಾದಿಸಿದ್ದು, ಒತ್ತೆಯಾಳುಗಳ ಬಿಡುಗಡೆಯನ್ನು ತಡೆಹಿಡಿದಿರುವುದಾಗಿ ತಿಳಿಸಿದೆ.

ಮುಂದಿನ ಸೂಚನೆ ನೀಡುವರೆಗೂ ಕೈದಿಗಳ ಬಿಡುಗಡೆ ಇರುವುದಿಲ್ಲವೆಂದು ಅದು ಹೇಳಿದೆ. ಇದರಿಂದಾಗಿ ಶನಿವಾರ ಇಸ್ರೇಲ್ ಹಾಗೂ ಹಮಾಸ್ ನಡುವೆ ನಡೆಯಲಿದ್ದ ಕೈದಿಗಳ ವಿನಿಮಯ ಪ್ರಕ್ರಿಯೆಗೆ ಅನಿಶ್ಚಿತತೆ ಎದುರಾಗಿದೆ.

ಕದನವಿರಾಮ ಒಪ್ಪಂದವನ್ನು ಉಲ್ಲಂಘಿಸಿ ಇಸ್ರೇಲ್ ಗಾಝಾದ ಮೇಲೆ ದಾಳಿ ನಡೆಸುತ್ತಿದೆಯೆಂದು ಹಮಾಸ್ ಆಪಾದಿಸಿದೆ.ಗಾಝಾದ ಉತ್ತರ ಭಾಗಕ್ಕೆ ತೆರಳದಂತೆ ಇಸ್ರೇಲ್, ಫೆಲೆಸ್ತೀನಿಯರನ್ನು ತಡೆಯಲು ಯತ್ನಿಸುತ್ತಿದೆ. ಅವರ ಮೇಲೆ ಶೆಲ್ ಹಾಗೂ ಗುಂಡಿನ ದಾಳಿಯನ್ನು ನಡೆಸುವ ಮೂಲಕ ಎರಡನೆ ಹಂತದ ಕದನವಿರಾಮ ಮಾತುಕತೆಗೆ ಅಡ್ಡಿಪಡಿಸುತ್ತಿದೆಯೆಂದು ಹಮಾಸ್‌ನ ಮಿಲಿಟರಿ ಘಟಕದ ವಕ್ತಾರ ಅಬು ಉಬೈದಾ ಹೇಳಿದ್ದಾರೆ.

ಬಳಿಕ, ಇಸ್ರೇಲಿ ರಕ್ಷಣಾ ಸಚಿವ ಇಸ್ರಾಯೇಲ್ ಕಾರ್ಜ್ ಅವರು ಹೇಳಿಕೆಯೊಂದನ್ನು ನೀಡಿ ಬಂಧಿತರ ಬಿಡುಗಡೆಯನ್ನು ತಡೆಹಿಡಿದಿರುವ ಹಮಾಸ್‌ನ ನಡೆಯು ಕದನವಿರಾಮ ಒಪ್ಪಂದದ ಉಲ್ಲಂಘನೆಯಾಗಿದೆಯೆಂದು ಅವರು ಹೇಳಿದರು.

ಒಂದು ವೇಳೆ ಹಮಾಸ್ ಒಪ್ಪಿಕೊಂಡಂತೆ ಅದು ಶನಿವಾರ ಒತ್ತೆಯಾಳುಗಳನ್ನು ಹಸ್ತಾಂತರಿಸದೆ ಇದ್ದಲ್ಲಿ ಗಂಂಭೀರ ಪರಿಣಾಮಗಳಾಗಲಿವೆಯೆಂದು ಎಚ್ಚರಿಕೆ ನೀಡಿದ್ದಾರೆ.

ಹಮಾಸ್‌ ನ ಘೋಷಣೆಯ ಬೆನ್ನಲ್ಲೇ, ಕದನವಿರಾಮ ಒಪ್ಪಂದ ಉಲ್ಲಂಘಿಸದಂತೆ ನೆತನ್ಯಾಹು ಸರಕಾರದ ಮೇಲೆ ಒತ್ತ ಡ ಹೇರಲು ಒತ್ತೆಯಾಳುಗಳ ಬಂಧುಗಳು ಇಸ್ರೇಲ್ ರಾಜಧಾನಿ ಟೆಲ್‌ಅವೀವ್‌ನಲ್ಲಿ ಜಮಾಯಿಸಿ, ರ್ಯಾಲಿ ನಡೆಸಿದ್ದಾರೆ.

ಗಾಝಾದ ಮೇಲೆ ಒಡೆತನವನ್ನು ಸಾಧಿಸಲು ಮತ್ತು ಅದನ್ನು ಖರೀದಿಸಲು ಅಮೆರಿಕವು ಬದ್ಧವಾಗಿದೆಯೆಂಬ ಟ್ರಂಪ್ ಹೇಳಿಕೆಯನ್ನು ಹಮಾಸ್ ಮಂಗಳವಾರ ಬಲವಾಗಿ ಖಂಡಿಸಿದೆ. ಅಮೆರಿಕ ಅಧ್ಯಕ್ಷರ ಹೇಳಿಕೆಯು ಅವರ ಮೂರ್ಖತನವನ್ನು ಪ್ರತಿಬಿಂಬಿಸುತ್ತದೆ ಹಾಗೂ ಫೆಲೆಸ್ತೀನ್ ಮತ್ತು ಆ ಪ್ರದೇಶದ ಬಗ್ಗೆ ಅವರಿಗಿರುವ ಅಜ್ಞಾನವನ್ನು ಪ್ರತಿಬಿಂಬಿಸುತ್ತದೆ ಎಂದು ಹಮಾಸ್ ನಾಕ ಇಸ್ಸಾ ಅಲ್ ರಿಶ್ಕ್ ತಿಳಿಸಿದ್ದಾರೆ.

ಗಾಝಾವು ಖರೀದಿಸಲು ಅಥವಾ ಮಾರಾಟಕ್ಕಿಡುವಂತಹ ನೆಲವಲ್ಲ. ನೀವು ಮಾರಾಟಗಾರನ ಮನಸ್ಥಿತಿಯೊಂದಿಗೆ ನೀವು ಗಾಝಾದ ವಿಕ್ರಯಕ್ಕೆ ಮುಂದಾದಲ್ಲಿ ನೀವು ಸೋಲುಣ್ಣುವಿರಿ. ಫೆಲೆಸ್ತೀನಿಯನ್ನು ಸ್ಥಳಾಂತರಿಸುವ ಯಾವುದೇ ನಡೆಯನ್ನು ಜನರು ತಡೆಯಲಿದ್ದಾರೆ ಎಂದರು.

*ಶನಿವಾರದೊಳಗೆ ಒತ್ತೆಯಾಳುಗಳ ಬಿಡುಗಡೆಗೊಳಿಸಿ ಇಲ್ಲದಿದ್ದಲ್ಲಿ ಕದನವಿರಾಮ ರದ್ದು: ಟ್ರಂಪ್ ಎಚ್ಚರಿಕೆ

ಇಸ್ರೇಲ್ ಕದನವಿರಾಮ ಉಲ್ಲಂಘಿಸಿದೆಯೆಂದು ಆರೋಪಿಸಿ ಗಾಝಾದ ಒತ್ತೆಯಾಳುಗಳ ಬಿಡುಗಡೆಯನ್ನು ಹಮಾಸ್ ತಡೆಹಿಡಿದಿರುವುದನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಲವಾಗಿ ಖಂಡಿಸಿದ್ದಾರೆ.

ಫಾಕ್ಸ್ ನ್ಯೂಸ್ ಸುದ್ದಿಸಂಸ್ಥೆಯ ಜೊತೆ ಮಾತನಾಡಿದ ಅವರ, ಶನಿವಾರ 12 ಗಂಟೆಯೊಳಗೆ ಉಳಿದ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸದೆ ಹೋದಲ್ಲಿn ಕದನವಿರಾಮ ರದ್ದಾಗಲಿದೆ ಮತ್ತು ಘೋರ ನರಕವೇ ಎದುರಾಗಲಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

i8 ಈ ಅಂತಿಮ ಗಡುವಿನ ಬಗ್ಗೆ ತಾನು ಇಸ್ರೇಲಿ 8 ಬೆಂಜಮಿನ್ ನೆತನ್ಯಾಹು ಅವರಿಗೆ ಮಾಹಿತಿ ನೀಡಿರುವುದಾಗಿ ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News