ಹಿಜ್ಬುಲ್ಲಾ ನೆಲೆಗಳ ಮೇಲೆ ಇಸ್ರೇಲ್ ದಾಳಿ

Update: 2024-04-24 17:34 GMT

ಸಾಂದರ್ಭಿಕ ಚಿತ್ರ | Photo : NDTV

ಜೆರುಸಲೇಮ್: ದಕ್ಷಿಣ ಲೆಬನಾನ್‍ನಲ್ಲಿ ಹಿಜ್ಬುಲ್ಲಾಗಳ 40 ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಿರುವುದಾಗಿ ಇಸ್ರೇಲ್ ಸೇನೆ ಬುಧವಾರ ಹೇಳಿದೆ.

ಇಸ್ರೇಲ್ ಭದ್ರತಾ ಪಡೆ(ಐಡಿಎಫ್)ನ ಯುದ್ಧವಿಮಾನಗಳು ಹಾಗೂ ಫಿರಂಗಿ ಪಡೆ ದಕ್ಷಿಣ ಲೆಬನಾನ್‍ನಲ್ಲಿ ಹಿಜ್ಬುಲ್ಲಾಗಳ 40 ನೆಲೆಗಳ ಮೇಲೆ ದಾಳಿ ನಡೆಸಿದ್ದು ಶತ್ರುಗಳ ಶಸ್ತ್ರಾಸ್ತ್ರ ದಾಸ್ತಾನು ವ್ಯವಸ್ಥೆಗೆ ಹಾನಿಯಾಗಿದೆ ಎಂದು ಇಸ್ರೇಲ್ ಸೇನೆ ಘೋಷಿಸಿದೆ. ಈ ಮಧ್ಯೆ, ಬುಧವಾರ ಇಸ್ರೇಲ್ ಗಡಿಸನಿಹದ ಗ್ರಾಮವೊಂದರ ಮೇಲೆ 20ಕ್ಕೂ ಹೆಚ್ಚು ಕ್ಷಿಪಣಿ ದಾಳಿ ನಡೆಸಲಾಗಿದೆ ಎಂದು ಹಿಜ್ಬುಲ್ಲಾ ಮೂಲಗಳು ಹೇಳಿವೆ.

ಗಾಝಾದಲ್ಲಿ ಇಸ್ರೇಲ್-ಹಮಾಸ್ ನಡುವಿನ ಸಂಘರ್ಷ 200ನೇ ದಿನಕ್ಕೆ ಮುಂದುವರಿದಿದ್ದು ದಕ್ಷಿಣ ಗಾಝಾಪಟ್ಟಿಯ ರಫಾ ನಗರದ ಮೇಲೆ ಇಸ್ರೇಲ್ ಭದ್ರತಾ ಪಡೆ ದಾಳಿ ನಡೆಸುವ ಆತಂಕ ಹೆಚ್ಚಿದೆ. ರಫಾ ನಗರದಲ್ಲಿ ಆಂತರಿಕವಾಗಿ ಸ್ಥಳಾಂತರಗೊಂಡ ಸುಮಾರು 1.5 ದಶಲಕ್ಷ ಫೆಲೆಸ್ತೀನೀಯರು ಆಶ್ರಯ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News