ಇಟಲಿ | ದೋಣಿ ಮುಳುಗಿ 40 ವಲಸಿಗರು ನಾಪತ್ತೆ, ಬಾಲಕಿಯ ರಕ್ಷಣೆ
Update: 2024-12-11 16:32 GMT
ರೋಮ್ : ಇಟಲಿಯ ಲ್ಯಾಂಪೆಡುಸಾ ದ್ವೀಪದ ಬಳಿ 40ಕ್ಕೂ ಅಧಿಕ ವಲಸಿಗರಿದ್ದ ದೋಣಿ ಮುಳುಗಿದ್ದು ಓರ್ವ ಬಾಲಕಿಯನ್ನು ರಕ್ಷಿಸಲಾಗಿದೆ ಎಂದು ಮೆಡಿಟರೇನಿಯನ್ ವ್ಯಾಪ್ತಿಯಲ್ಲಿ ವಲಸಿಗರ ರಕ್ಷಣಾ ಕಾರ್ಯಾಚರಣೆಯಲ್ಲಿ ನೆರವಾಗುವ `ಕಂಪಾಸ್ ಕಲೆಕ್ಟಿವ್' ಎಂಬ ಎನ್‍ಜಿಒ ಸಂಸ್ಥೆ ಬುಧವಾರ ಹೇಳಿದೆ.
ಮೂರು ದಿನದ ಹಿಂದೆ ದೋಣಿ ಮುಳುಗಿತ್ತು. ದೋಣಿಯಲ್ಲಿದ್ದ ರಬ್ಬರ್ ಟ್ಯೂಬಿನ ಆಧಾರದಲ್ಲಿ 11 ವರ್ಷದ ಬಾಲಕಿಯೊಬ್ಬಳು ಅತ್ಯಂತ ಅಸಹಾಯಕ ಸ್ಥಿತಿಯಲ್ಲಿ ಸಮುದ್ರದ ನೀರಿನಲ್ಲಿ ತೇಲುತ್ತಿರುವುದನ್ನು ಪತ್ತೆ ಹಚ್ಚಿದ ಎನ್‍ಜಿಒ ಸಂಘಟನೆಯ ಹಡಗು ತಕ್ಷಣ ಸ್ಥಳಕ್ಕೆ ಧಾವಿಸಿ ಬಾಲಕಿಯನ್ನು ರಕ್ಷಿಸಿದೆ. ದೋಣಿಯಲ್ಲಿದ್ದ 44 ಮಂದಿ ಮುಳುಗಿರುವುದಾಗಿ ಬಾಲಕಿ ಮಾಹಿತಿ ನೀಡಿದ್ದಾಳೆ. ಟ್ಯುನೀಷಿಯಾದ ಎಸ್‍ಫಾಕ್ಸ್‍ನಿಂದ ಹೊರಟಿದ್ದ ದೋಣಿ ಸುಂಟರಗಾಳಿಗೆ ಸಿಲುಕಿ ಮುಳುಗಿದೆ ಎಂದು ವರದಿಯಾಗಿದೆ.