ಭಾರೀ ಮಳೆಗೆ ತತ್ತರಿಸಿದ ಲಾಹೋರ್ 44 ವರ್ಷಗಳಲ್ಲೇ ಗರಿಷ್ಠ

Update: 2024-08-02 23:09 IST
ಭಾರೀ ಮಳೆಗೆ ತತ್ತರಿಸಿದ ಲಾಹೋರ್ 44 ವರ್ಷಗಳಲ್ಲೇ ಗರಿಷ್ಠ

PC : PTI 

  • whatsapp icon

ಲಾಹೋರ್ : ಪಾಕಿಸ್ತಾನದ ಸಾಂಸ್ಕೃತಿಕ ರಾಜಧಾನಿ ಲಾಹೋರ್‌ನಲ್ಲಿ ಗುರುವಾರ ಬೆಳಗ್ಗೆ ದಾಖಲೆಯ ಮಳೆಯಾಗಿದ್ದು, ನಗರದ ರಸ್ತೆಗಳು ಜಲಾವೃತಗೊಂಡಿದೆ.

ನಗರದ ವಿವಿಧೆಡೆ ಮಳೆ ಸಂಬಂಧಿ ದುರಂತಗಳಲ್ಲಿ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ. ವಾಹನ ಸಂಚಾರ ಅಸ್ತವ್ಯಸ್ತಗೊಂಡಿದ್ದು, ದೈನಂದಿನ ಜನಜೀವನ ಬಾಧಿತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಒಂದು ತಿಂಗಳಿನಿಂದ ಪಾಕ್‌ನಾದ್ಯಂತ ಮಳೆ ಹಾನಿಯಿಂದಾಗಿ ಮೃತಪಟ್ಟವರ ಸಂಖ್ಯೆ ನೂರನ್ನು ದಾಟಿದೆಯೆಂದು ಮಾಧ್ಯಮಗಳು ವರದಿ ಮಾಡಿವೆ.

ಗುರುವಾರ ಒಂದೇ ಸಮನೆ ಮಳೆಯು ಧಾರಾಕಾರವಾಗಿ ಸುರಿದ ಪರಿಣಾಮವಾಗಿ ನಗರದ ರಸ್ತೆಗಳು ದಿಢೀರನೇ ಜಲಾವೃತಗೊಂಡವು.

ನಗರದಲ್ಲಿನ ಆಸ್ಪತ್ರೆಗಳಿಗೂ ನೆರೆ ನೀರು ನುಗ್ಗಿದ್ದರಿಂದ, ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳು ಸಂಕಷ್ಚಕ್ಕೀಡಾಗಿದ್ದಾರೆಂದು ವರದಿಗಳು ತಿಳಿಸಿವೆ.

ಲಾಹೋರ್‌ನ ಕೆಲವು ಪ್ರದೇಶಗಳಲ್ಲಿ ಕೆಲವೇ ತಾಸುಗಳ ಅವಧಿಯಲ್ಲಿ ದಾಖಲೆಯ 353 ಮಿ.ಮೀ. ಮಳೆಯಾಗಿದ್ದು, ನಗರದ 44 ವರ್ಷಗಳ ವರ್ಷಗಳ ದಾಖಲೆಯನ್ನು ಮುರಿದಿದೆ.

ಪ್ರಮುಖ ರಸ್ತೆಗಳನ್ನು ಆವರಿಸಿರುವ ನೀರನ್ನು ಪಂಪ್‌ಗಳ ಮೂಲಕ ಹೊರಬಿಡುವ ಕಾರ್ಯಾಚರಣೆ ನಡೆಯುತ್ತಿದೆಯೆಂದು ಜಲ ಹಾಗೂ ನೈರ್ಮಲ್ಯ ಏಜೆನ್ಸಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News