ಲೆಬನಾನ್: ಇಸ್ರೇಲ್ ದಾಳಿಯಲ್ಲಿ4 ಮಂದಿ ಮೃತ್ಯು
Update: 2025-03-27 23:04 IST

ಸಾಂದರ್ಭಿಕ ಚಿತ್ರ (PTI)
ಬೈರೂತ್ : ದಕ್ಷಿಣ ಲೆಬನಾನ್ನಲ್ಲಿ ಗುರುವಾರ ಇಸ್ರೇಲ್ನ ವೈಮಾನಿಕ ದಾಳಿಯಲ್ಲಿ 4 ಮಂದಿ ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಯೊಹ್ಮೊರ್ ನಗರದ ಬಳಿ ಕಾರೊಂದನ್ನು ಗುರಿಯಾಗಿಸಿ ಶತ್ರುಗಳು ನಡೆಸಿದ ಡ್ರೋನ್ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ನಗರದ ಮೇಲೆ ಇಸ್ರೇಲ್ ಪಡೆ ಫಿರಂಗಿ ದಾಳಿಯನ್ನೂ ನಡೆಸಿದೆ. ದಕ್ಷಿಣ ಲೆಬನಾನ್ನ ಮತ್ತೊಂದು ನಗರ ಮಾರೂಬ್ನಲ್ಲಿ ಕಾರೊಂದರ ಮೇಲೆ ಇಸ್ರೇಲ್ ನಡೆಸಿದ ಡ್ರೋನ್ ದಾಳಿಯಲ್ಲಿ ಓರ್ವ ಮೃತಪಟ್ಟಿದ್ದು ಮತ್ತೊಬ್ಬ ಗಾಯಗೊಂಡಿದ್ದಾನೆ ಎಂದು ಸರ್ಕಾರಿ ಸ್ವಾಮ್ಯದ ನ್ಯಾಷನಲ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ದಕ್ಷಿಣ ಲೆಬನಾನ್ನ ಯೊಹ್ಮೊರ್ನಲ್ಲಿ ಹಿಜ್ಬುಲ್ಲಾ ಸದಸ್ಯರು ಶಸ್ತ್ರಾಸ್ತ್ರಗಳನ್ನು ಸಾಗಿಸುತ್ತಿರುವ ಮಾಹಿತಿಯ ಆಧಾರದಲ್ಲಿ ದಾಳಿ ನಡೆಸಿರುವುದಾಗಿ ಇಸ್ರೇಲಿ ಮಿಲಿಟರಿ ಹೇಳಿದೆ.