ಮುಳುಗಿದ ವಿಹಾರ ನೌಕೆ | ಒಬ್ಬ ಮೃತ್ಯು, 6 ಮಂದಿ ನಾಪತ್ತೆ

Update: 2024-08-19 15:12 GMT

ಸಾಂದರ್ಭಿಕ ಚಿತ್ರ | Photo : AI 

ರೋಮ್ : ಇಟಲಿ ಬಳಿಯ ಸಿಸಿಲಿ ಕರಾವಳಿಯಲ್ಲಿ ಐಷಾರಾಮಿ ವಿಹಾರ ನೌಕೆಯೊಂದು ಸಮುದ್ರದಲ್ಲಿ ಸುಂಟರಗಾಳಿಗೆ ಸಿಲುಕಿ ಮುಳುಗಿದ್ದು ನೌಕೆಯಲ್ಲಿದ್ದ ಓರ್ವ ಸಾವನ್ನಪ್ಪಿದ್ದಾನೆ. ಇತರ 6 ಮಂದಿ ನಾಪತ್ತೆಯಾಗಿರುವುದಾಗಿ ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

ಬ್ರಿಟನ್ ನಲ್ಲಿ ನೋಂದಣಿಯಾಗಿದ್ದ 184 ಅಡಿ ಉದ್ದದ ವಿಹಾರ ನೌಕೆಯಲ್ಲಿ 22 ಜನರಿದ್ದರು. ಸುಂಟರಗಾಳಿಗೆ ಸಿಲುಕಿ ಮುಳುಗಿದ್ದ ನೌಕೆಯಿಂದ 15 ಮಂದಿಯನ್ನು ರಕ್ಷಣಾ ಕಾರ್ಯಕರ್ತರು ರಕ್ಷಿಸಿದ್ದು ಇವರಲ್ಲಿ ಮಗುವಿನ ಸಹಿತ 8 ಮಂದಿ ತೀವ್ರ ಅಸ್ವಸ್ಥರಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಬ್ರಿಟನ್, ಅಮೆರಿಕ ಮತ್ತು ಕೆನಡಾದ 6 ಮಂದಿ ಪ್ರಜೆಗಳು ನಾಪತ್ತೆಯಾಗಿದ್ದು ಶೋಧ ಕಾರ್ಯ ಮುಂದುವರಿದಿದೆ. ಓರ್ವನ ಮೃತದೇಹ ಪತ್ತೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬಯೆಸಿಯನ್ ಎಂಬ ಹೆಸರಿನ ಈ ವಿಹಾರ ನೌಕೆ ಸಿಸಿಲಿಯ ಮಿಲಾಝೊ ಬಂದರಿನಿಂದ ಆಗಸ್ಟ್ 14ರಂದು ಪ್ರಯಾಣ ಆರಂಭಿಸಿದ್ದು ಸಿಸಿಲಿ ರಾಜಧಾನಿ ಪಲೇಮೊದ ಕರಾವಳಿ ತೀರದ ಬಳಿ ಮುಳುಗಿದೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News