ಹಯಾವೊ ಮಿಯಾಜಾಕಿಗೆ ಮ್ಯಾಗ್ಸೆಸೆ ಪ್ರಶಸ್ತಿ

Update: 2024-09-01 16:23 GMT

ಹಯಾವೊ ಮಿಯಾಜಾಕಿ | PC : Studio Ghibli/Instagram

ಮನಿಲಾ: ಜಪಾನ್‍ನ ಚಲನಚಿತ್ರ ನಿರ್ದೇಶಕ ಹಯಾವೊ ಮಿಯಾಜಾಕಿ ಅವರನ್ನು ಈ ವರ್ಷದ ಪ್ರತಿಷ್ಟಿತ ರಾಮೊನ್ ಮ್ಯಾಗ್ಸೆಸೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಘಿಬ್ಲಿ ಸ್ಟುಡಿಯೊದ ಸಹ ಸ್ಥಾಪಕರಾಗಿರುವ ಮಿಯಾಜಾಕಿ, ಹಲವಾರು ಅನಿಮೇಟೆಡ್ ಚಲನಚಿತ್ರಗಳ ಕಥೆಬರೆದು ನಿರ್ದೇಶಿಸಿದ್ದಾರೆ. ಮಿಯಾಜಾಕಿ ಅವರು ಪರಿಸರ ಸಂರಕ್ಷಣೆ ಮತ್ತು ಶಾಂತಿಯಂತಹ ಕಷ್ಟಕರ ವಿಷಯಗಳ ಮೇಲೆ ಸಾಕಷ್ಟು ಅನಿಮೇಟೆಡ್ ಚಿತ್ರಗಳನ್ನು ನಿರ್ಮಿಸಿ ಅವುಗಳನ್ನು ಮಕ್ಕಳು ಗ್ರಹಿಸುವಂತೆ ಮಾಡಿದ್ದಾರೆ ಎಂದು ಮ್ಯಾಗ್ಸೆಸೆ ಪ್ರಶಸ್ತಿ ಪ್ರತಿಷ್ಟಾನದ ಹೇಳಿಕೆ ತಿಳಿಸಿದೆ. ವಿಯೆಟ್ನಾಮ್‍ನ ವೈದ್ಯ ಡಾ. ನುಯೆನ್ ಥಿ ಎನಾಕ್ ಫುವಾಂಗ್, ಭೂತಾನ್‍ನಲ್ಲಿ ಶಿಕ್ಷಣ ಪ್ರತಿಷ್ಟಾನದ ಸ್ಥಾಪಕ ಕರ್ಮಾ ಫುಂಟ್‍ಶೊ, ಇಂಡೊನೇಶ್ಯಾದಲ್ಲಿ ಅರಣ್ಯ ಸಂರಕ್ಷಣಾ ಅಭಿಯಾನವನ್ನು ಮುನ್ನಡೆಸುತ್ತಿರುವ ಫರ್ವಿಜಾ ಫರ್ಹಾನ್ ಅವರನ್ನೂ ಮ್ಯಾಗ್ಸೆಸೆ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದ್ದು ನವೆಂಬರ್‍ನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News