ಹಿಜ್ಬುಲ್ಲಾದಿಂದ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ | ಪ್ರತಿರೋಧಕ್ಕೆ ಇಸ್ರೇಲ್ ಸಿದ್ಧತೆ

Update: 2024-06-14 17:00 GMT

ಬೈರೂತ್ : ಇಸ್ರೇಲ್‍ನ ವೈಮಾನಿಕ ದಾಳಿಯಲ್ಲಿ ತನ್ನ ಉನ್ನತ ಕಮಾಂಡರ್‍ಗಳು ಸಾವನ್ನಪ್ಪಿರುವುದಕ್ಕೆ ಪ್ರತಿಯಾಗಿ ಇಸ್ರೇಲ್ ಸೇನಾಪಡೆಯತ್ತ ರಾಕೆಟ್‍ಗಳು ಮತ್ತು ಡ್ರೋನ್‍ಗಳ ಮಳೆಗರೆದಿರುವುದಾಗಿ ಲೆಬನಾನ್‍ನ ಇರಾನ್ ಬೆಂಬಲಿತ ಹಿಜ್ಬುಲ್ಲಾ ಸಶಸ್ತ್ರ ಹೋರಾಟಗಾರರ ಗುಂಪು ಹೇಳಿದೆ.

ಇಸ್ರೇಲ್ ಯೋಧರ 6 ಶಿಬಿರಗಳು ಹಾಗೂ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿ ರಾಕೆಟ್‍ಗಳನ್ನು ಪ್ರಯೋಗಿಸಲಾಗಿದ್ದು ಒಂದು ರಾಕೆಟ್ ಇಸ್ರೇಲ್‍ನ ಗುಪ್ತಚರ ಪ್ರಧಾನ ಕಚೇರಿಗೆ ಅಪ್ಪಳಿಸಿದೆ ಎಂದು ಹಿಜ್ಲುಲ್ಲಾ ಹೇಳಿದೆ.

ದಾಳಿಯನ್ನು ದೃಢಪಡಿಸಿರುವ ಇಸ್ರೇಲ್ ಸೇನೆ, ಗೋಲನ್ ಹೈಟ್ಸ್ ಮತ್ತು ಗಲೀಲಿ ಪ್ರದೇಶದತ್ತ 40 ರಾಕೆಟ್‍ಗಳನ್ನು ಪ್ರಯೋಗಿಸಲಾಗಿದ್ದು ಇಬ್ಬರು ಯೋಧರು ಗಾಯಗೊಂಡಿದ್ದಾರೆ. ಈ ದಾಳಿಗೆ ಪ್ರತಿ ದಾಳಿ ನಡೆಸಲು ಎಲ್ಲಾ ಸಿದ್ಧತೆ ನಡೆಸಲಾಗುತ್ತಿದೆ ಎಂದು ಪ್ರತಿಕ್ರಿಯಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News