ಮೊರಾಕ್ಕೊ ಭೂಕಂಪ: 2800 ದಾಟಿದ ಮೃತರ ಸಂಖ್ಯೆ

Update: 2023-09-12 04:28 GMT

Photo: twitter.com/Reuters

ಮೊರಾಕ್ಕೊ: ಆರು ದಶಕಗಳಲ್ಲೇ ಅತ್ಯಂತ ಭೀಕರ ಎನಿಸಿದ ಭೂಕಂಪಕ್ಕೆ ಪುಟ್ಟ ಆಫ್ರಿಕನ್ ದೇಶ ತತ್ತರಿಸಿದ್ದು, ಈ ವಿಕೋಪದಲ್ಲಿ ಮೃತಪಟ್ಟವರ ಸಂಖ್ಯೆ 2800ನ್ನು ದಾಟಿದೆ. ಭೂಕಂಪದಿಂದ ಸಂಭವಿಸಿದ ಕಟ್ಟಡ ಕುಸಿತಗಳ ಅವಶೇಷಗಳ ಅಡಿ ಬದುಕಿಕೊಂಡಿರುವವರಿಗಾಗಿ ಶೋಧ ಹಾಗೂ ಪರಿಹಾರ ಕಾರ್ಯಾಚರಣೆ ಮುಂದುವರಿದಿದೆ.

ಮೊರಾಕ್ಕೊ ಪರಿಹಾರ ಕಾರ್ಯಾಚರಣೆಯಲ್ಲಿ ಸ್ಪೇನ್, ಬ್ರಿಟನ್ ಹಾಗೂ ಕತಾರ್ ನಿಂದ ಆಗಮಿಸಿದ ತಂಡಗಳು ನಿರಂತರ ಪ್ರಯತ್ನ ಮುಂದುವರಿಸಿವೆ. ಹೈ ಅಟ್ಲಾಸ್ ಪರ್ವತ ಶ್ರೇಣಿಯಲ್ಲಿ ಶುಕ್ರವಾರ ಸಂಭವಿಸಿದ 6.8 ತೀವ್ರತೆಯ ಭೂಕಂಪದಿಂದಾಗಿ ಅಪಾರ ಸಾವು ನೋವು ಸಂಭವಿಸಿದೆ.

ಅಧಿಕೃತ ಟಿವಿ ವರದಿಯ ಪ್ರಕಾರ 2862 ಮಂದಿ ಮೃತಪಟ್ಟಿದ್ದು, 2562 ಮಂದಿ ಗಾಯಗೊಂಡಿದ್ದಾರೆ. ಮಣ್ಣಿನ ಇಟ್ಟಿಗೆಗಳಿಂದ ಕಟ್ಟಿದ ಮನೆಗಳ ಅವಶೇಷಗಳಡಿ ಸಿಕ್ಕಿಹಾಕಿಕೊಂಡಿರುವವರು ಬದುಕಿ ಉಳಿದಿರುವ ಸಾಧ್ಯತೆ ಕಡಿಮೆ ಎಂದು ಪರಿಹಾರ ತಂಡಗಳು ಹೇಳಿವೆ.

ತಲತ್ ಎನ್ ಯಾಕೂಬ್ ಪ್ರದೇಶದಲ್ಲಿ ವ್ಯಾಪಕ ಹಾನಿ ಮತ್ತು ಸಾವು ನೋವು ಸಂಭವಿಸಿದ್ದು, ಮನೆಯ ಛಾವಣಿ ಕುಸಿದು ಬಿದ್ದು ಬಾಲಕನೊಬ್ಬ ಮೃತಪಟ್ಟಿದ್ದಾನೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News