ಮಾಸ್ಕೋ ಭಯೋತ್ಪಾದಕ ದಾಳಿಯಲ್ಲಿ ಉಕ್ರೇನ್ ಪಾತ್ರದ ಬಗ್ಗೆ ಪುರಾವೆಯಿಲ್ಲ: ಅಮೆರಿಕ

Update: 2024-03-26 17:08 GMT

ವಾಶಿಂಗ್ಟನ್: ಮಾಸ್ಕೋದ ಕ್ರೊಕಸ್ ಸಿಟಿ ಸಭಾಂಗಣದಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಐಸಿಸ್ ನಡೆಸಿದೆ ಎಂದು ಪುನರುಚ್ಚರಿಸಿರುವ ಅಮೆರಿಕ, ಈ ದಾಳಿಯಲ್ಲಿ ಉಕ್ರೇನ್ ಸರಕಾರದ ಪಾತ್ರದ ಬಗ್ಗೆ ಯಾವುದೇ ಸ್ಪಷ್ಟತೆ ಅಥವಾ ಪುರಾವೆಯಿಲ್ಲ ಎಂದಿದೆ.

ಭಯೋತ್ಪಾದಕ ದಾಳಿಯನ್ನು ಐಸಿಸ್ ನಡೆಸಿದೆ ಮತ್ತು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ಗೆ ಇದು ತಿಳಿದಿದೆ. ಭಯೋತ್ಪಾದಕ ದಾಳಿ ನಡೆದಿರುವುದು ಪುಟಿನ್ಗೆ ಸ್ಪಷ್ಟವಾಗಿ ಗೊತ್ತಿದೆ. ಈ ದಾಳಿಯಲ್ಲಿ ಉಕ್ರೇನ್ ಸರಕಾರದ ಪಾತ್ರವಿರುವ ಬಗ್ಗೆ ಪುರಾವೆಗಳಿಲ್ಲ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್-ಪಿಯರೆ ಮಂಗಳವಾರ ಸುದ್ಧಿಗೋಷ್ಠಿ ಯಲ್ಲಿ ಹೇಳಿದ್ದಾರೆ.

`ಮಾಸ್ಕೋದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯನ್ನು ಖಂಡಿಸುತ್ತೇವೆ. ದಾಳಿಯಲ್ಲಿ ಮೃತಪಟ್ಟವರು ಹಾಗೂ ಗಾಯಗೊಂಡವರ ಕುಟುಂಬದವರಿಗೆ ಸಂತಾಪ ಸೂಚಿಸುತ್ತಿದ್ದೇವೆ. ಭಯೋತ್ಪಾದಕ ದಾಳಿ ನಡೆಯುವ ಸಾಧ್ಯತೆಯಿರುವುದರಿಂದ ಎಚ್ಚರಿಕೆ ವಹಿಸುವಂತೆ ಮಾರ್ಚ್ 7ರಂದೇ ರಶ್ಯದಲ್ಲಿರುವ ಅಮೆರಿಕನ್ ಪ್ರಜೆಗಳಿಗೆ ಮುನ್ನೆಚ್ಚರಿಕೆ ನೀಡಿದ್ದೆವು. ಈ ದಾಳಿಯ ಸಂಪೂರ್ಣ ಹೊಣೆಯನ್ನು ವಹಿಸಿರುವ ಐಸಿಸ್ ಸಾಮುದಾಯಿಕ ಭಯೋತ್ಪಾದಕ ಶತ್ರುವಾಗಿದ್ದು ಅದನ್ನು ಎಲ್ಲೆಡೆ ಸೋಲಿಸಬೇಕಿದೆ' ಎಂದವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News