ಫ್ರಾನ್ಸ್ ಸಂಸತ್‌ನಲ್ಲಿ ಫೆಲೆಸ್ತೀನ್ ಧ್ವಜ ಬೀಸಿದ ಸಂಸದನ ಬಂಧನ

Update: 2024-05-29 18:14 GMT

Photograb : youtube \ Guardian News

ಪ್ಯಾರಿಸ್ : ಫ್ರಾನ್ಸ್‌ನ ಸಂಸತ್‌ನ ಅಧಿವೇಶನದ ವೇಳೆ ಫೆಲೆಸ್ತೀನ್ ಪತಾಕೆಯನ್ನು ಬೀಸಿದ ಫ್ರೆಂಚ್ ಸಂಸದರೊಬ್ಬರನ್ನು ಮಂಗಳವಾರ ಸದನದಿಂದ ಅಮಾನತುಗೊಳಿಸಲಾಗಿದೆ.

ಫ್ರಾನ್ಸ್ ದೇಶವು ಫೆಲೆಸ್ತೀನ್‌ಗೆ ಸ್ವತಂತ್ರ ರಾಷ್ಟ್ರದ ಸ್ಥಾನಮಾನವನ್ನು ನೀಡುವುದೇ ಎಂಬ ಕುರಿತು ಸದನದಲ್ಲಿ ಚರ್ಚೆ ನಡೆದ ಸಂದರ್ಭ ಎಡ ಪಕ್ಷವಾದ ಲೆಸ್ ಇನ್‌ಸೂಮಿಸ್‌ನ ಸಂಸದ ಹಾಗೂ ಉಪನಾಯಕ ಸೆಬಾಸ್ಟಿಯನ್ ದಿಲೊಗ್ ಅವರು ಫೆಲೆಸ್ತೀನ್ ಪತಾಕೆಯನ್ನು ಬೀಸಿದರು. ಸರಕಾರದ ಸಮ್ಮತಿಯನ್ನು ಪಡೆಯದೆ ಸೆಬಾಸ್ಟಿಯನ್ ಅವರು ಫೆಲೆಸ್ತೀನ್ ಪತಾಕೆಯನ್ನು ಸದನದಲ್ಲಿ ಬೀಸಿರುವುದು ಅಂಗೀಕಾರಾರ್ಹವಾದ ನಡವಳಿಕೆಯಲ್ಲವೆಂದು ಸ್ಪೀಕರ್ ಯೆಲ್ ಬ್ರೌನ್‌ಪಿವೈಟ್ ಅಸಮಾಧಾನ ವ್ಯಕ್ತಪಡಿಸಿದರು ಹಾಗೂ ಸಂಸದ ಸೆಬಾಸ್ಟಿಯನ್ ಅವರನ್ನು ಸದನದಿಂದ ಎರಡು ವಾರಗಳವರೆಗೆ ಅಮಾನತಿನಲ್ಲಿರಿಸಿದರು.

ಆನಂತರ ಸೆಬಾಸ್ಟಿಯನ್ ಅವರು ಸದನದ ಹೊರಗೆ ಅಮಾನತನ್ನು ವಿರೋಧಿಸಿ ತನ್ನ ಪ್ರತಿಭಟನೆಯನ್ನು ನಡೆಸಿದರು. ಈ ಮಧ್ಯೆ ಸದನದಲ್ಲಿ ಸೆಬಾಸ್ಟಿಯನ್ ಅವರು ಫೆಲೆಸ್ತೀನ್ ಧ್ವಜವನ್ನು ಬೀಸಿದ್ದನ್ನು ಅವರ ಪಕ್ಷವಾದ ಲೆಸ್ ಇನ್‌ಸೂಮಿಸ್ ಸಮರ್ಥಿಸಿದೆ. ವಿಶ್ವದಲ್ಲಿ ಶಾಂತಿ ಸ್ಥಾಪನೆಗಾಗಿ ಯಾವುದೇ ಸಮಯದಲ್ಲೂ , ಎಲ್ಲಿ ಬೇಕಾದರೂ ಪ್ರತಿಭಟನೆ ನಡೆಸಲು ತಾನು ಸಿದ್ಧವಿರುವುದಾಗಿ ಅದು ಹೇಳಿದೆ

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News