ಎಂಫಾಕ್ಸ್ ವಿರುದ್ಧ ಮೊದಲ ಲಸಿಕೆಗೆ ವಿಶ್ವಸಂಸ್ಥೆ ಅನುಮೋದನೆ

Update: 2024-09-13 15:44 GMT

PC : X 

ವಿಶ್ವಸಂಸ್ಥೆ: ವಿಶ್ವ ಆರೋಗ್ಯ ಸಂಸ್ಥೆ ಶುಕ್ರವಾರ ಎಂವಿಎ-ಬಿಎನ್ ಲಸಿಕೆಯನ್ನು ತನ್ನ ಪೂರ್ವಾರ್ಹತಾ ಪಟ್ಟಿಗೆ ಸೇರಿಸಲಾದ ಎಂಫಾಕ್ಸ್ ವಿರುದ್ಧದ ಮೊದಲ ಲಸಿಕೆ ಎಂದು ಘೋಷಿಸಿದ್ದು ಕೆಲವು ದೇಶಗಳಲ್ಲಿ ಬಳಸಲು ಶಿಫಾರಸು ಮಾಡಿದೆ.

ನಾಲ್ಕು ವಾರಗಳ ಅಂತರದಲ್ಲಿ ನೀಡಲಾಗುವ ಎರಡು ಡೋಸ್ ಇಂಜೆಕ್ಷನ್ ಎಂವಿಎ-ಬಿನ್ ಲಸಿಕೆಯನ್ನು 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಅನುಮೋದಿಸಲಾಗಿದೆ. ತಣ್ಣನೆಯ ಸ್ಥಳ(ರೆಫ್ರಿಜರೇಟರ್)ದಲ್ಲಿ ಶೇಖರಿಸಿದ ಬಳಿಕ ಇದು 8 ವಾರಗಳವರೆಗೆ 2ರಿಂದ 8 ಡಿಗ್ರಿ ಸೆಲ್ಶಿಯಸ್ ತಾಪಮಾನದಲ್ಲಿ ಸ್ಥಿರವಾಗಿರುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News