ಅಫ್ಘಾನ್ ರಕ್ಷಣಾ ಸಚಿವರನ್ನು ಭೇಟಿಯಾದ ಭಾರತೀಯ ನಿಯೋಗ

Update: 2024-11-10 17:18 GMT

ಜೆ.ಪಿ.ಸಿಂಗ್ , ಜೆ.ಪಿ.ಸಿಂಗ್|  PC : (X/MoDAfghanistan2)

ಕಾಬೂಲ್ : ಮಹತ್ವದ ನಡೆಯೊಂದರಲ್ಲಿ ಭಾರತದ ನಿಯೋಗವು ಶನಿವಾರ ಅಫ್ಘಾನಿಸ್ತಾನದ ಹಂಗಾಮಿ ರಕ್ಷಣಾ ಸಚಿವ ಮುಲ್ಲಾ ಮುಹಮ್ಮದ್ ಯಾಕೂಬ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದೆ.

ಇರಾನ್‌ ನಲ್ಲಿ ತಾನು ಅಭಿವೃದ್ಧಿಪಡಿಸುತ್ತಿರುವ ಚಬಹಾರ್ ಬಂದರನ್ನು ಬಳಸಿಕೊಳ್ಳುವಂತೆ ಆಹ್ವಾನ ನೀಡಿದೆ. ಅಲ್ಲದೆ ಅಫ್ಘಾನಿಸ್ತಾನಕ್ಕೆ ತಾನು ನೀಡುತ್ತಿರುವ ಮಾನವೀಯ ನೆರವನ್ನು ವಿಸ್ತರಿಸುವ ಬಗ್ಗೆಯೂ ಚರ್ಚಿಸಿದೆ.

ಭಾರತೀಯ ನಿಯೋಗದ ನೇತೃತ್ವವನ್ನು ಪಾಕಿಸ್ತಾನ -ಅಮೆರಿಕ - ಇರಾನ್ ವಿಭಾಗದ ಜಂಟಿ ಕಾರ್ಯದರ್ಶಿ ಜೆ.ಪಿ.ಸಿಂಗ್ ವಹಿಸಿದ್ದರು. ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಹಾಮಿದ್ ಕರ್ಝಾಯಿ ಹಾಗೂ ಇತರ ಹಿರಿಯ ನಾಯಕರನ್ನು ಮತ್ತು ಅಪ್ಘಾನ್‌ ನಲ್ಲಿ ಕಾರ್ಯಾಚರಿಸುತ್ತಿರುವ ವಿಶ್ವಸಂಸ್ಥೆ ಏಜೆನ್ಸಿಗಳ ಮುಖ್ಯಸ್ಥರನ್ನು ಕೂಡಾ ಭಾರತೀಯ ನಿಯೋಗ ಭೇಟಿಯಾಗಿರುವುದಾಗಿ ವಿದೇಶಾಂಗ ವ್ಯವಹಾರಗಳ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.

2021ರಿಂದ ಅಫ್ಘಾನಿಸ್ತಾನದ ಆಡಳಿತ ನಡೆಸುತ್ತಿರುವ ತಾಲಿಬಾನ್ ಸರಕಾರಕ್ಕೆ ಭಾರತವು ಮಾನ್ಯತೆಯನ್ನು ನೀಡಿಲ್ಲ. ಆದರೆ ಆ ದೇಶದ ಜನತೆಗೆ ಭಾರತವು ಗೋಧಿ, ಔಷಧಿಗಳು, ವೈದ್ಯಕೀಯ ಸಾಮಾಗ್ರಿಗಳು ಸೇರಿದಂತೆ ಮಾನವೀಯ ನೆರವನ್ನು ಒದಗಿಸುತ್ತಾ ಬಂದಿದೆ.

ಚಬಹಾರ್ ಬಂದರನ್ನು ಅಭಿವೃದ್ಧಿಪಡಿಸಲು ಹಾಗೂ ನಿರ್ವಹಿಸುವ ಕುರಿತಾಗಿ ಈ ವರ್ಷದ ಆರಂಭದಲ್ಲಿ ಭಾರತವು ಇರಾನ್ ಜೊತೆ ಒಪ್ಪಂದವನ್ನು ಏರ್ಪಡಿಸಿಕೊಂಡಿತ್ತು..

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News