ಚೀನಾದೊಂದಿಗೆ `ಬೆಲ್ಟ್ ಆ್ಯಂಡ್ ರೋಡ್' ಒಪ್ಪಂದ ನವೀಕರಿಸಿದ ನೇಪಾಳ
Update: 2024-12-04 16:36 GMT
ಬೀಜಿಂಗ್ : ಚೀನಾದ ಜತೆಗಿನ ಬೆಲ್ಟ್ ಆ್ಯಂಡ್ ರೋಡ್ ಉಪಕ್ರಮದ ಒಪ್ಪಂದವನ್ನು ನೇಪಾಳ ಬುಧವಾರ ನವೀಕರಿಸಿದ್ದು ಮಾರ್ಗಸೂಚಿ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ನೇಪಾಳದ ವಿದೇಶಾಂಗ ಇಲಾಖೆ ಹೇಳಿದೆ.
2017ರಲ್ಲಿ ಉಭಯ ದೇಶಗಳ ನಡುವೆ ಪ್ರಾಥಮಿಕ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದರೂ ಈ ಯೋಜನೆಯಲ್ಲಿ ಯಾವುದೇ ಪ್ರಗತಿಯಾಗಿಲ್ಲ. ಸೋಮವಾರ 4 ದಿನಗಳ ಭೇಟಿಗಾಗಿ ಚೀನಾಕ್ಕೆ ಆಗಮಿಸಿರುವ ನೇಪಾಳ ಪ್ರಧಾನಿ ಕೆ.ಪಿ.ಶರ್ಮ ಒಲಿ ನೇತೃತ್ವದ ನಿಯೋಗ ಒಪ್ಪಂದ ನವೀಕರಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಿದ್ದು ಮಾರ್ಗಸೂಚಿ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ಇದರೊಂದಿಗೆ ಇದೀಗ ಎರಡೂ ದೇಶಗಳೂ ರಸ್ತೆಯನ್ನು ಮೇಲ್ದರ್ಜೆಗೇರಿಸುವುದು, ಸಾರಿಗೆ ಕಾರಿಡಾರ್ ನಿರ್ಮಾಣ ಸೇರಿದಂತೆ ಯೋಜನೆಯ ವಿವರದೊಂದಿಗೆ ಮುಂದುವರಿಯಲು ಸಾಧ್ಯವಾಗಲಿದೆ.