ನೇಪಾಳ | ವಿಶ್ವಾಸಮತ ಗೆದ್ದ ಪ್ರಧಾನಿ ಕೆ.ಪಿ. ಒಲಿ

Update: 2024-07-21 16:49 GMT

Photo: X@Kpsharmaoli

ಕಠ್ಮಂಡು : ನೂತನವಾಗಿ ನೇಮಕಗೊಂಡಿರುವ ನೇಪಾಳದ ಪ್ರಧಾನಿ ಕೆ.ಪಿ. ಶರ್ಮ ಒಲಿ ರವಿವಾರ ನೇಪಾಳ ಸಂಸತ್ತಿನಲ್ಲಿ ವಿಶ್ವಾಸಮತ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಸಮ್ಮಿಶ್ರ ಸರಕಾರದ ಪ್ರಧಾನಿಯಾಗಿ ನೇಮಕಗೊಂಡ ಒಂದು ವಾರದ ಬಳಿಕ ಕೆ.ಪಿ ಶರ್ಮ ಸಂಸತ್ತಿನಲ್ಲಿ ವಿಶ್ವಾಸಮತ ನಿರ್ಣಯ ಮಂಡಿಸಿದ್ದರು. 263 ಸದಸ್ಯಬಲದ ಹೌಸ್ ಆಫ್ ರೆಪ್ರಸೆಂಟೇಟಿವ್ಸ್ನಲ್ಲಿ ನಿರ್ಣಯದ ಪರ 188 ಮತ್ತು ವಿರೋಧವಾಗಿ 74 ಮತ ಚಲಾವಣೆಗೊಂಡಿವೆ. ಓರ್ವ ಸದಸ್ಯ ಗೈರು ಹಾಜರಾಗಿದ್ದರು. ಪ್ರಧಾನಿ ಕೆ.ಪಿ. ಶರ್ಮ ಒಲಿ ವಿಶ್ವಾಸಮತ ಗೆದ್ದಿರುವುದಾಗಿ ಸ್ಪೀಕರ್ ದೇವ್ರಾಜ್ ಘಿಮಿರೆ ಘೋಷಿಸಿದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News