ರಾಕೆಟ್ ದಾಳಿ: ಪ್ರತೀಕಾರ ಕ್ರಮಕ್ಕೆ ಇಸ್ರೇಲ್ ಸಂಪುಟ ಸಮ್ಮತಿ
Update: 2024-07-29 17:13 GMT
ಟೆಲ್‍ಅವೀವ್: ರವಿವಾರ ಗೋಲನ್ ಹೈಟ್ಸ್ ನ ಕೆಲವು ಪ್ರದೇಶಗಳ ಮೇಲೆ ಲೆಬನಾನ್ ಗಡಿಯಾಚೆಗಿಂದ ನಡೆದಿರುವ ರಾಕೆಟ್ ದಾಳಿಗೆ ಪ್ರತೀಕಾರ ಕ್ರಮ ಕೈಗೊಳ್ಳುವ ಪ್ರಸ್ತಾವನೆಯನ್ನು ಇಸ್ರೇಲ್ ಸಂಪುಟ ಅನುಮೋದಿಸಿರುವುದಾಗಿ ವರದಿಯಾಗಿದೆ.
ಪ್ರಧಾನಿ ಬೆಂಜಮಿನ್ ನೆತನ್ಯಾಹು ನೇತೃತ್ವದಲ್ಲಿ ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ರವಿವಾರದ ದಾಳಿಗೆ ಹಿಜ್ಬುಲ್ಲಾ ಹೊಣೆ ಎಂದು ನಿರ್ಧರಿಸಲಾಗಿದೆ ಮತ್ತು ಇಸ್ರೇಲ್ ತನ್ನ ಪ್ರಜೆಗಳ ರಕ್ಷಣೆಗೆ ಪ್ರತಿಕ್ರಮ ಕೈಗೊಳ್ಳಲು ಸಿದ್ಧ ಎಂದು ಘೋಷಿಸಿರುವುದಾಗಿ ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.