ಬಾಂಗ್ಲಾ | ಸುಪ್ರೀಂಕೋರ್ಟ್ ಗೆ ಹೊಸ ಸಿಜೆ ನೇಮಕ
Update: 2024-08-11 16:46 GMT
ಢಾಕಾ : ಬಾಂಗ್ಲಾದೇಶದ ಸುಪ್ರೀಂಕೋರ್ಟ್‍ನ ನೂತನ ಮುಖ್ಯ ನ್ಯಾಯಾಧೀಶ(ಸಿಜೆ) ಆಗಿ ಸೈಯದ್ ರೆಫತ್ ಅಹ್ಮದ್‍ರನ್ನು ಅಧ್ಯಕ್ಷ ಮುಹಮ್ಮದ್ ಶಹಾಬುದೀನ್ ನೇಮಕಗೊಳಿಸಿರುವುದಾಗಿ ಕಾನೂನು ಮತ್ತು ನ್ಯಾಯ ಇಲಾಖೆಯ ಅಧಿಸೂಚನೆ ಹೇಳಿದೆ.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರಾಗಿದ್ದ ಒಬೈದುಲ್ ಹಸನ್ ಹಾಗೂ ಇತರ ಐವರು ನ್ಯಾಯಾಧೀಶರು ಶನಿವಾರ ಹುದ್ದೆಗೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ನೂತನ ಸಿಜೆ ನೇಮಕಾತಿಯ ಬಗ್ಗೆ ಅಧಿಸೂಚನೆ ಹೊರಡಿಸಲಾಗಿದೆ. ಹೈಕೋರ್ಟ್‍ನ ವಿಭಾಗೀಯ ಪೀಠವೊಂದರ ಮುಖ್ಯ ನ್ಯಾಯಾಧೀಶರಾಗಿರುವ ಅಹ್ಮದ್ ಸಿಜೆ ಆಗಿ ಪ್ರಮಾಣವಚನ ಸ್ವೀಕರಿಸಿದಂದಿನಿಂದ ಅವರ ಸೇವಾವಧಿ ಪ್ರಾರಂಭವಾಗಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.