ನೈಜೀರಿಯ | ಭಾರೀ ನೆರೆಗೆ 179 ಬಲಿ ; 2 ಲಕ್ಷಕ್ಕೂ ಅಧಿಕ ಮಂದಿ ನಿರಾಶ್ರಿತ

Update: 2024-08-29 17:25 GMT

AI ಸಾಂದರ್ಭಿಕ ಚಿತ್ರ

ಲಾಗೋಸ್ : ಆಫ್ರಿಕನ್ ರಾಷ್ಟ್ರವಾದ ನೈಜೀರಿಯದ ವಿವಿಧೆಡೆ ಕಳೆದೊಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಸಂಭವಿಸಿದ ಭೀಕರ ಪ್ರವಾಹದಲ್ಲಿ ಕನಿಷ್ಠ 179 ಮಂದಿ ಸಾವನ್ನಪ್ಪಿದ್ದಾರೆ ಹಾಗೂ 2 ಲಕ್ಷಕ್ಕೂ ಅಧಿಕ ಮಂದಿ ನಿರಾಶ್ರಿತರಾಗಿದ್ದಾರೆಂದು ತುರ್ತುಪರಿಸ್ಥಿತಿ ನಿರ್ವಹಣಾಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

ಉತ್ತರ ನೈಜೀರಿಯದಲ್ಲಿ ಪ್ರವಾಹ ಪರಿಸ್ಥಿತಿ ಅತ್ಯಂತ ತೀವ್ರವಾಗಿದ್ದು, 2,65,885 ಎಕರೆ ಕೃಷಿಭೂಮಿಗಳು ಹಾನಿಗೀಡಾಗಿವೆ ಎಂದು ರಾಷ್ಟ್ರೀಯ ತುರ್ತುಸ್ಥಿತಿ ನಿರ್ವಹಣಾ ಏಜೆನ್ಸಿ (ಎನ್‌ಇಎಂಎ) ಬಹಿರಂಗಪಡಿಸಿರುವ ಅಂಕಿಅಂಶಗಳು ತೋರಿಸಿಕೊಟ್ಟಿವೆ.

ಬಹುತೇಕ ಸಾವುಗಳು ದೇಶದ ಉತ್ತರ ಪ್ರಾಂತದಲ್ಲಿ ಸಂಭವಿಸಿದೆ. ಆದರೆ ನೈಜೀರಿಯದ ದಕ್ಷಿಣ ಹಾಗೂ ಮಧ್ಯಭಾಗಗಳು ಭಾರೀ ಮಳೆ ಇನ್ನೂ ಮುಂದುವರಿದಿದ್ದು, ಅಲ್ಲಿ ಪ್ರವಾಹ ಪರಿಸ್ಥಿತಿ ವಿಕೋಪಕ್ಕೆ ತಲುಪುವ ಸಾಧ್ತತೆಯಿದೆಯೆಂದು ಎನ್‌ಇಎಂಎನ ವಕ್ತಾರೆ ಎಝೆಕೀಲ್ ಮಂರೆ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News