ಲೆಬನಾನ್‍ನಲ್ಲಿ ಯುದ್ಧ ಬೇಡ : ಇಸ್ರೇಲ್‍ಗೆ ಅಮೆರಿಕ ಸಲಹೆ

Update: 2024-06-26 16:12 GMT

ಸಾಂದರ್ಭಿಕ ಚಿತ್ರ

ವಾಷಿಂಗ್ಟನ್: ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವಿನ ಮತ್ತೊಂದು ಯುದ್ಧವು ಪ್ರಾದೇಶಿಕ ಸಂಘರ್ಷಕ್ಕೆ ತಿರುಗಲಿದ್ದು ಮಧ್ಯಪ್ರಾಚ್ಯದ ಮೇಲೆ ಭಯಾನಕ ಪರಿಣಾಮಕ್ಕೆ ಕಾರಣವಾಗಲಿದೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಎಚ್ಚರಿಕೆ ನೀಡಿದ್ದಾರೆ.

ಅಮೆರಿಕಕ್ಕೆ ಭೇಟಿ ನೀಡಿರುವ ಇಸ್ರೇಲ್‍ನ ರಕ್ಷಣಾ ಸಚಿವ ಯೊವಾವ್ ಗ್ಯಾಲಂಟ್‍ರ ಜತೆಗಿನ ಸಭೆಯ ಬಳಿಕ ಮಾತನಾಡಿದ ಆಸ್ಟಿನ್ `ಉದ್ವಿಗ್ನತೆ ಇನ್ನಷ್ಟು ಉಲ್ಬಣಿಸುವುದನ್ನು ತಡೆಯಲು ರಾಜತಾಂತ್ರಿಕತೆ ಅತ್ಯುತ್ತಮ ಮಾರ್ಗವಾಗಿದೆ' ಎಂದರು.

ರಾಜತಾಂತ್ರಿಕ ವಿಧಾನದ ಮೂಲಕ ಗಡಿಯಲ್ಲಿನ ಉದ್ವಿಗ್ನತೆ ಶಮನಗೊಳಿಸುವ ಪ್ರಕ್ರಿಯೆಗೆ ಇಸ್ರೇಲ್ ಮುಕ್ತವಾಗಿದೆ. ಆದರೆ ಎಲ್ಲಾ ಸಂಭಾವ್ಯ ಪರಿಸ್ಥಿತಿಯನ್ನು ಎದುರಿಸಲು ನಾವು ಸನ್ನದ್ಧರಾಗಿದ್ದೇವೆ' ಎಂದು ಗ್ಯಾಲಂಟ್ ಹೇಳಿದರು. ಗಡಿಭಾಗದಲ್ಲಿ ಯಾವುದೇ ತಪ್ಪು ಲೆಕ್ಕಾಚಾರವೂ ಪೂರ್ಣ ಪ್ರಮಾಣದ ಯುದ್ಧದ ರೂಪಕ್ಕೆ ತಿರುಗಬಹುದು ಎಂದು ಜರ್ಮನಿ ಮತ್ತು ಕೆನಡಾಗಳು ಎಚ್ಚರಿಕೆ ನೀಡಿದ್ದು ಗರಿಷ್ಟ ಸಂಯಮ ವಹಿಸುವಂತೆ ಆಗ್ರಹಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News