ಗಾಝಾ ರಕ್ತಪಾತಕ್ಕೆ ಇಸ್ರೇಲ್ ಕಾರಣ ; ಉ.ಕೊರಿಯಾ ಆರೋಪ

Update: 2023-10-10 17:59 GMT

Photo: PTI 

ಪ್ಯೋಂಗ್ಯಾಂಗ್: ಗಾಝಾದಲ್ಲಿ ರಕ್ತಪಾತಕ್ಕೆ ಇಸ್ರೇಲ್ ಕಾರಣವಾಗಿದೆ ಎಂದು ಉತ್ತರ ಕೊರಿಯಾದ ಸರಕಾರಿ ಸ್ವಾಮ್ಯದ ಸುದ್ದಿಸಂಸ್ಥೆ ಗುರುವಾರ ದೂಷಿಸಿದೆ.

ಇಸ್ರೇಲ್-ಹಮಾಸ್ ನಡುವಿನ ಸಂಘರ್ಷ ಮತ್ತು ಸಾವು-ನೋವಿನ ಕುರಿತು ಆಡಳಿತಾರೂಢ `ವರ್ಕರ್ಸ್ ಪಾರ್ಟಿ'ಯ ಮುಖವಾಣಿ ರೊಡೊಂಗ್ ಸಿನ್ಮನ್'ನಲ್ಲಿ ಪ್ರಕಟವಾದ ಲೇಖನದಲ್ಲಿ `ಫೆಲೆಸ್ತೀನಿಯನ್ ಜನರ ವಿರುದ್ಧ ಇಸ್ರೇಲ್ ನ ನಿರಂತರ ಅಪರಾಧ ಕೃತ್ಯಗಳ ಪರಿಣಾಮ ಈ ಘರ್ಷಣೆಯಾಗಿದೆ. ಸ್ವತಂತ್ರ ಫೆಲೆಸ್ತೀನಿಯನ್ ರಾಷ್ಟ್ರ ನಿರ್ಮಿಸುವುದು ಈ ಸಮಸ್ಯೆಗೆ ಪರಿಹಾರ ರೂಪಿಸುವ ಮೂಲಭೂತ ಮಾರ್ಗವಾಗಿದೆ' ಎಂದು ಪ್ರತಿಪಾದಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News