ಸಂವಿಧಾನದಲ್ಲಿ ಪ್ರಮುಖ ತಿದ್ದುಪಡಿ ಮಾಡಿದ ಉತ್ತರ ಕೊರಿಯಾ
Update: 2023-09-28 17:57 GMT
ಪೋಂಗ್ಯಾಂಗ್, ಸೆ.28: ಪರಮಾಣು ಶಕ್ತ ದೇಶವಾಗುವ ತನ್ನ ಮಹಾತ್ವಾಕಾಂಕ್ಷೆಯನ್ನು ಸಾಧಿಸುವುದಕ್ಕೆ ಪೂರಕವಾಗಿ ಉತ್ತರ ಕೊರಿಯಾ ಸರಕಾರ ಸಂವಿಧಾನದಲ್ಲಿ ಪ್ರಮುಖ ತಿದ್ದುಪಡಿ ಮಾಡಿರುವುದಾಗಿ ಸರಕಾರಿ ಸ್ವಾಮ್ಯದ ಕೆಸಿಎನ್‍ಎ ಸುದ್ಧಿಸಂಸ್ಥೆ ಗುರುವಾರ ವರದಿ ಮಾಡಿದೆ.
`ತನ್ನ ಅಸ್ತಿತ್ವದ ಹಕ್ಕುಗಳನ್ನು ಖಚಿತಪಡಿಸಲು ಮತ್ತು ಯುದ್ಧವನ್ನು ತಡೆಯಲು ಹೆಚ್ಚು ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸಲು ಉತ್ತರ ಕೊರಿಯಾಕ್ಕೆ ಅನುವು ಮಾಡಿಕೊಡುವ ಸಂವಿಧಾನ ತಿದ್ದುಪಡಿಯನ್ನು ದೇಶದ ಸಂಸತ್ತು ಅವಿರೋಧವಾಗಿ ಅನುಮೋದಿಸಿದೆ ಎಂದು ವರದಿ ಹೇಳಿದೆ. `ದೇಶದ ಪರಮಾಣು ಶಕ್ತಿ ನಿರ್ಮಾಣ ನೀತಿಯನ್ನು ದೇಶದ ಮೂಲ ಕಾನೂನಾಗಿ ಶಾಶ್ವತಗೊಳಿಸಲಾಗಿದೆ. ಅದನ್ನು ಯಾರೂ ಉಲ್ಲಂಘಿಸಲು ಅನುಮತಿಸಲಾಗುವುದಿಲ್ಲ' ಎಂದು ಸಂಸತ್‍ನಲ್ಲಿ ಮಾತನಾಡಿದ ಅಧ್ಯಕ್ಷ ಕಿಮ್‍ಜಾಂಗ್ ಉನ್ ಹೇಳಿದ್ದಾರೆ.