ಕ್ರಿಸ್ಟೋಫರ್ ನೋಲನ್ ನಿರ್ದೇಶನದ ‘ಓಪನ್ ಹೈಮರ್’ ಚಲನಚಿತ್ರಕ್ಕೆ ಏಳು ಆಸ್ಕರ್ ಪ್ರಶಸ್ತಿ
ಲಾಸ್ಏಂಜಲೀಸ್: ಇತ್ತೀಚಿನ ವರ್ಷಗಳ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲೇ ಅಚ್ಚರಿ ಎನಿಸಿದ, ಕ್ರಿಸ್ಟೋಫರ್ ನೋಲನ್ ಅವರ ಓಪನ್ ಹೈಮರ್ ಏಳು ಆಸ್ಕರ್ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಅತ್ಯುತ್ತಮ ಚಿತ್ರ ಮತ್ತು ಉತ್ತಮ ನಿರ್ದೇಶನ ಪ್ರಶಸ್ತಿಗೆ ಈ ಚಿತ್ರ ಪಾತ್ರವಾಗಿದೆ.
ಪರಮಾಣು ಬಾಂಬ್ ಸೃಷ್ಟಿಕರ್ತ ರಾಬರ್ಟ್ ಜೆ. ಓಪನ್ ಹೈಮರ್ ಅವರ ಜೀವನಚಿತ್ರ ಇದಾಗಿದೆ. ವಿಮರ್ಶಕರಿಂದ ಅತ್ಯುತ್ತಮ ಚಿತ್ರ ಎಂದು ಬಣ್ಣಿಸಿಕೊಂಡಿದ್ದ ಈ ಬ್ಲಾಕ್ಬಸ್ಟರ್ ಸಿನಿಮಾ ಒಟ್ಟು 13 ವರ್ಗಗಳಲ್ಲಿ ನಾಮನಿರ್ದೇಶನಗೊಂಡಿತ್ತು.
ನೋಲನ್ ಅವರಿಗೆ ಅತ್ಯುತ್ತಮ ನಿರ್ದೇಶನಕ್ಕಾಗಿ ಆಸ್ಕರ್ ಗೆದ್ದುಕೊಟ್ಟಿರುವ ಈ ಚಿತ್ರದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಸಿಲಿಯನ್ ಮರ್ಫಿ ಅವರಿಗೆ ಸಂದಿದೆ. ಜತೆಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ರಾಬರ್ಟ್ ಡೌನಿ ಅವರಿಗೆ ಲಭಿಸಿದೆ.
ಆಸ್ಕರ್ ಪ್ರಶಸ್ತಿ ಗಳಿಸಿದ ಚಿತ್ರ ಹಾಗೂ ಕಲಾವಿದರ ವಿವರ ಈ ಕೆಳಗಿನಂತಿದೆ…
• ಅತ್ಯುತ್ತಮ ಚಿತ್ರ: ಓಪನ್ ಹೈಮರ್
• ಅತ್ಯುತ್ತಮ ನಿರ್ದೇಶಕ: ಕ್ರಿಸ್ಟೋಫರ್ ನೋಲನ್
• ಅತ್ಯುತ್ತಮ ನಟ: ಸಿಲಿಯನ್ ಮರ್ಫಿ
• ಅತ್ಯುತ್ತಮ ನಟಿ: ಎಮ್ಮಾ ಸ್ಟೋನ್
• ಅತ್ಯುತ್ತಮ ಪೋಷಕ ನಟ: ರಾಬರ್ಟ್ ಡೌನಿ ಜೂನಿಯರ್ (ಓಪನ್ ಹೈಮರ್)
• ಅತ್ಯುತ್ತಮ ಛಾಯಾಗ್ರಹಣ: ‘ಓಪನ್ ಹೈಮರ್’
• ಅತ್ಯುತ್ತಮ ಸಂಕಲನ: ‘ಓಪನ್ ಹೈಮರ್’
• ಅತ್ಯುತ್ತಮ ಅಂತರರಾಷ್ಟ್ರೀಯ ಚಲನಚಿತ್ರ: ‘ದಿ ಝೋನ್ ಆಫ್ ಇಂಟರೆಸ್ಟ್’
• ಅತ್ಯುತ್ತಮ ಪೋಷಕ ನಟಿ: ಡೇವಿನ್ ಜಾಯ್ ರಾಂಡೋಲ್ಫ್ (ದಿ ಹೋಲ್ಡವರ್ಸ್)
• ಅತ್ಯುತ್ತಮ ಹಾಡು: ಬಾರ್ಬಿ (ವಾಟ್ ವಾಸ್ ಐ ಮೇಡ್ ಫಾರ್)
• ಅತ್ಯುತ್ತಮ ವಿಶ್ಯುವಲ್ ಎಫೆಕ್ಟ್: ‘ಗಾಡ್ಜಿಲ್ಲಾ ಮೈನಸ್ ಒನ್’
• ಅತ್ಯುತ್ತಮ ಧ್ವನಿ ವಿನ್ಯಾಸ: ‘ದಿ ಝೋನ್ ಆಫ್ ಇಂಟರೆಸ್ಟ್’
• ಅತ್ಯುತ್ತಮ ಮೂಲ ಚಿತ್ರಕಥೆ: ಜಸ್ಟಿನ್ ಟ್ರೈಟ್ ಮತ್ತು ಆರ್ಥರ್ ಹರಾರಿ ಅವರ ‘ಅನ್ಯಾಟಮಿ ಆಫ್ ಎ ಫಾಲ್’
• ಅತ್ಯುತ್ತಮ ಸಾಕ್ಷ್ಯಚಿತ್ರ: ಜಾನ್ ಮತ್ತು ಯೊಕೊ ಅವರ ‘ವಾರ್ ಇಸ್ ಓವರ್’
• ಅತ್ಯುತ್ತಮ ಅನಿಮೇಟೆಡ್ ಚಲನಚಿತ್ರ: ಹಯಾವೊ ಮಿಯಾಜಾಕಿ ಮತ್ತು ತೋಶಿಯೊ ಸುಜುಕ್ ಅವರ ‘ದಿ ಬಾಯ್ ಅಂಡ್ ದಿ ಹೆರಾನ್’
• ಅತ್ಯುತ್ತಮ ಮೇಕಪ್ ಮತ್ತು ಕೇಶ ವಿನ್ಯಾಸ: ‘ಪೂರ್ ಥಿಂಗ್ಸ್’ (Poor Things)
• ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರ: ‘ದಿ ಲಾಸ್ಟ್ ರಿಪೇರಿ ಶಾಪ್’